ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಅವಿಶ್ವಾಸ ಗೊತ್ತುವಳಿ ವಿಫಲ, ಒಬ್ಬ ನಿರ್ದೇಶಕ ರಾಜೀನಾಮೆ

ಎಪಿಎಂಸಿ ಅಧ್ಯಕ್ಷರಾಗಿ ಅಶೋಕಗೌಡ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ವಿರುದ್ಧ ಸೋಮವಾರ ನಡೆದ ಅವಿಶ್ವಾಸ ಗೊತ್ತುವಳಿ ವಿಫಲವಾಗಿದ್ದು, ಅಶೋಕ ಗೌಡ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಎಪಿಎಂಸಿ ಒಟ್ಟು 15 ಸದಸ್ಯ ಬಲ ಹೊಂದಿದೆ. ಇವರ ಪೈಕಿ ಅಧ್ಯಕ್ಷ ಅಶೋಕಗೌಡ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವಂತೆ 9 ಜನ ನಿರ್ದೇಶಕರು ಮನವಿ ಮಾಡಿದ್ದರು. ಈ ಗುಂಪಿನ 8 ಜನ ನಿರ್ದೇಶಕರು ಸೇರಿ 15 ಜನರು ಸಭೆಗೆ ಗೈರಾಗಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು. ಇದರಿಂದ ಬೇಸತ್ತ ನಿರ್ದೇಶಕ ಚಂದ್ರಶೇಖರಪ್ಪ ವೈಯಕ್ತಿಕ ಕಾರಣ ಹೇಳಿ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

14 ಜನ ನಿರ್ದೇಶಕರು ಕಾಂಗ್ರೆಸ್ ಬೆಂಬಲ ಪಡೆದು ಗೆಲುವು ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ನಿರ್ದೇಶಕರು ಒಬ್ಬರು ಮಾತ್ರ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತದಿಂದಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ವಿಫಲವಾಗಿದೆ. ಆಡಳಿತ ಮಂಡಳಿಯ ಉಳಿದ ಐದು ತಿಂಗಳ ಅವಧಿಯನ್ನು ಅಶೋಕಗೌಡ ಅವರೇ ಮುಂದುವರಿಸಲಿದ್ದಾರೆ.

ತಹಶೀಲ್ದಾರ್ ಎಲ್.ಎಂ. ನಂದೀಶ ಅವರು ಮಾತನಾಡಿ, ‘ಸಭೆಗೆ ಯಾವೊಬ್ಬ ಸದಸ್ಯರೂ ಹಾಜರಾಗದ ಕಾರಣ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷ ಅಶೋಕಗೌಡ ಮಾತನಾಡಿ, ‘ಅವಿಶ್ವಾಸ ಗೊತ್ತುವಳಿ ಸಭೆ ವಿಫಲವಾಗುವ ಮೂಲಕ ಮತ್ತೆ ನನಗೇ ಜಯ ದೊರಕಿದೆ. ಎಪಿಎಂಸಿ ಸರ್ವಾಂಗೀಣ ಪ್ರಗತಿಗೆ ಸರ್ವರ ಸಹಕಾರ ಬಯಸುತ್ತೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು