ದಾವಣಗೆರೆ: ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರಿಯಾ ದಿನದ ಅಂಗವಾಗಿ ‘ಯುದ್ಧಬೇಡ, ಶಾಂತಿಬೇಕು’ ಎಂದು ಎಐಯುಟಿಯುಸಿ ವತಿಯಿಂದ ಗುರುವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟದ (ಡಬ್ಲ್ಯುಎಫ್ಟಿಯು) ಕರೆಯಂತೆ ಈ ದಿನಾಚರಣೆ ನಡೆಸಲಾಗುತ್ತಿದೆ. ಉಕ್ರೇನ್ನಲ್ಲಿ ಸಾಮ್ರಾಜ್ಯಶಾಹಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಹಾಗೂ ಅಮೆರಿಕ–ನ್ಯಾಟೊ ಸಾಮ್ರಾಜ್ಯಶಾಹಿ ಮಿಲಿಟರಿ ಶಕ್ತಿಗಳ ಕುಕೃತ್ಯದಿಂದ ಲಕ್ಷಾಂತರ ದುಡಿಯುವ ಜನರ ಜೀವ ಹಾಗೂ ಜೀವನ ಹಾಳಾಗಿದೆ. ಜಗತ್ತಿನ ಶಾಂತಿಗೆ ಇನ್ನಷ್ಟು ಅಪಾಯ ಬಂದೊದಗಿದೆ. ರಷ್ಯಾ, ಚೀನಾ ಮತ್ತಿತರ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆ ಪತನಗೊಂಡು ಬಂಡವಾಳಶಾಹಿ ವ್ಯವಸ್ಥೆ ಮರುಸ್ಥಾಪನೆಗೊಂಡು ಜಾಗತೀಕರಣ ನೀತಿಗಳು ಜಾರಿಯಾದ ಮೇಲೆ ಯುದ್ಧಭೀತಿ ಹೆಚ್ಚಾಗಿದೆ ಎಂದು ಪ್ರತಿಭಟನಕಾರರು
ಆರೋಪಿಸಿದರು.

ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಹಿರೇಮಠ್, ರವಿ, ತುಕರಾಂ, ವಿರೂಪಾಕ್ಷಪ್ಪ, ಬಸವರಾಜ್, ಅನಿತಾ ಕುಕ್ಕವಾಡ, ಅನಿಲ್, ಶಿವಾಜಿ ರಾವ್ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.