ಸಾಸ್ವೆಹಳ್ಳಿ: ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರೇಬಾಸೂರು, ಉಜ್ಜನಿಪುರ, ಸದಾಶಿವಪುರ ಹಾಗೂ ಬೀರಗೊಂಡನಹಳ್ಳಿ ಗ್ರಾಮಗಳಿವೆ. ಆದರೆ, ಸದಾಶಿವಪುರ ಬಿಟ್ಟು ಉಳಿದ ಗ್ರಾಮಗಳ ಜನರಿಗೆ ಇ-ಸ್ವತ್ತು ಸಿಗುತ್ತಿಲ್ಲ. ಇದು ಈ ಪಂಚಾಯಿತಿಯ ಸಮಸ್ಯೆಯಾಗಿದೆ.

‘ಮನೆಯಲ್ಲಿ ಅಜ್ಜನ ಕಾಲದಿಂದಲೂ ವಾಸವಿದ್ದೇವೆ. ನಾವಿರುವ ಮನೆ ದಾಖಲೆಯನ್ನು ಪಂಚಾಯಿತಿಯಲ್ಲಿ ಕೇಳಿದರೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮದ ಜನಾರ್ದನ್ ಪಾಟೀಲ್.

‘ಅರ್ಧ ಗ್ರಾಮವು ಗ್ರಾಮ ಠಾಣೆಗೆ ಸೇರಿದ್ದು, ಇನ್ನುಳಿದ ಜಾಗದ ಪಹಣಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದೆ. 150ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರು ಇ-ಸ್ವತ್ತು ನೀಡುವಂತೆ ಕೋರುತ್ತಿದ್ದಾರೆ. ದಾಖಲೆಗಳನ್ನು ಒದಗಿಸಿದರೂ, ಆ ಮನೆಗಳ ಇ-ಸ್ವತ್ತು ನೀಡಲು ಆಗುತ್ತಿಲ್ಲ. ಈ ಬಗ್ಗೆ ಹಲವು ಅರ್ಜಿಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದರೂ, ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಹಿರೇಬಾಸೂರು ಗ್ರಾಮ ಪಂಚಾಯಿತಿ ಸದಸ್ಯ ಹಾಲೇಶ್.

‘ಬೀರಗೊಂಡನ ಹಳ್ಳಿಯಲ್ಲಿ 600ಕ್ಕೂ ಹೆಚ್ಚು ಮನೆಗಳಿವೆ. ಇದು 1965ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಅಂದು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನಕ್ಕೆ ಜಾಗ ನೀಡಲಾಗಿತ್ತು. ಗ್ರಾಮಸ್ಥರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರಿಗೂ ಇ-ಸ್ವತ್ತನ್ನು ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಪಂಚಾಯಿತಿಯಲ್ಲಿ ಠರಾವು ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕವಿತಾ ರಮೇಶ್.

‘ಉಜ್ಜನಿಪುರ ಮತ್ತು ಕ್ಯಾಂಪ್ನಲ್ಲಿ 110 ಮನೆಗಳಿವೆ. ಇದು 1971ರಲ್ಲಿ ಸ್ಥಳಾಂತರಗೊಂಡ ಗ್ರಾಮ. ಈ ಜಾಗದ ಪಹಣಿ 5 ಜನರ ಹೆಸರಿನಲ್ಲಿದ್ದು, ಇ-ಸ್ವತ್ತು ನೀಡಲು ಆಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇ-ಸ್ವತ್ತು ಇಲ್ಲದ ಕಾರಣ ಗ್ರಾಮಸ್ಥರು ಪಂಚಾಯಿತಿಯ ಕಂದಾಯ ಕಟ್ಟುತ್ತಿಲ್ಲ’ ಎಂದು ಅಧ್ಯಕ್ಷ ಲೋಹಿತ್ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಇ-ಸ್ವತ್ತು ಸಮಸ್ಯೆ ಬಗೆಹರಿಸದಿದ್ದರೆ, ತಾಲ್ಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.

‘ಇ-ಸ್ವತ್ತು ಗ್ರಾಮ ಪಂಚಾಯಿತಿಯ ಅತಿದೊಡ್ಡ ಸಮಸ್ಯೆಯಾಗಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ’ ಎಂದು ಪಿಡಿಒ ಮಂಜುಳಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.