ಶನಿವಾರ, ಆಗಸ್ಟ್ 20, 2022
21 °C
252 ಜನರಿಗೆ ಕೊರೊನಾ l 125 ಮಂದಿ ಬಿಡುಗಡೆ

ದಾವಣಗೆರೆ: ಕೋವಿಡ್‌ನಿಂದ 200ರ ಗಡಿ ದಾಡಿದ ಮೃತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್–19ನಿಂದಾಗಿ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು,  252 ಜನರಿಗೆ ಶುಕ್ರವಾರ ಸೋಂಕು ಪತ್ತೆಯಾಗಿದೆ.

125 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ದಿಂದ  ಈವರೆಗೆ 206 ಜನ ಮೃತಪಟ್ಟಿದ್ದಾರೆ.

 ಕೋವಿಡ್ ಸೋಂಕಿತರಲ್ಲಿ 49 ಮಂದಿ 60 ವರ್ಷ ಮೇಲ್ಪಟ್ಟವರು ಇದ್ದಾರೆ. ಎರಡು ವರ್ಷದ ಇಬ್ಬರು ಹಾಗೂ ಐದು ಹಾಗೂ 7 ವರ್ಷದ ಬಾಲಕಿಯರು ಐದು ಬಾಲಕರು ಸೇರಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 7 ಮಂದಿಗೆ ಸೋಂಕು ತಗುಲಿದೆ.

 ಕೊರೊನಾ ಜೊತೆಗೆ ಉಸಿರಾಟ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ  ದಾವಣಗೆರೆಯ ವಿನೋಬ ನಗರದ 72 ವರ್ಷದ ವೃದ್ಧೆ,  ನಿಜಲಿಂಗಪ್ಪ ಬಡಾವಣೆಯ 66 ವರ್ಷದ ವೃದ್ಧ,  ದೊಡ್ಡಪೇಟೆಯ  62 ವರ್ಷದ ವೃದ್ಧೆ,  ಜಯನಗರದ 43 ವರ್ಷದ ಪುರುಷ, ಹರಪನಹಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ 62 ವರ್ಷದ  ವೃದ್ಧ,  ಅಶೋಕ ನಗರದ 43 ವರ್ಷದ ಮಹಿಳೆ,  ಚನ್ನಗಿರಿ ತಾಲೂಕಿನ ಅರೇಹಳ್ಳಿಯ  46 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

 ದಾವಣಗೆರೆ ನಗರ ಮತ್ತು ತಾಲ್ಲೂಕಿನ ಇತರೆ ಭಾಗದ 125,  ಹರಿಹರದ 17, ಜಗಳೂರಿನ 15, ಚನ್ನಗಿರಿಯ 46, ಹೊನ್ನಾಳಿಯ 40 ಹಾಗೂ ಹೊರ ಜಿಲ್ಲೆಯ 9 ಜನರಿಗೆ ಕೋವಿಡ್‌–19 ದೃಢಪಟ್ಟಿದೆ.  

ಕೊರೊನಾದಿಂದ ಗುಣಮುಖ ರಾದವರಲ್ಲಿ ದಾವಣಗೆರೆ ನಗರ ಮತ್ತು ತಾಲ್ಲೂಕಿನ 53, ಹರಿಹರದ 22,  ಜಗಳೂರುನ ಒಬ್ಬರು, ಚನ್ನಗಿರಿ, ಹೊನ್ನಾಳಿ ತಾಲ್ಲೂಕಿನ ತಲಾ 23 ಹಾಗೂ ಹೊರ ಜಿಲ್ಲೆಯ ಮೂವರು ಸೇರಿದ್ದಾರೆ.

 ಜಿಲ್ಲೆಯಲ್ಲಿ ಈವರೆಗೆ ಒಟ್ಟು 10571 ಮಂದಿಗೆ ಕೊರೊನಾ  ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 7748  ಜನರು ಬಿಡುಗಡೆಯಾಗಿದ್ದಾರೆ. 2617 ಸಕ್ರಿಯ ಪ್ರಕರಣಗಳಿವೆ.

ಮಲೇಬೆನ್ನೂರು: 6 ಮಂದಿಗೆ ಕೊರೊನಾ

ಮಲೇಬೆನ್ನೂರು: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದೆ.

ಪಟ್ಟಣ, ಕೆ.ಎನ್. ಹಳ್ಳಿ ಒಬ್ಬ ಪುರುಷ, ಹೊಳೆಸಿರಿಗೆರೆಯ ಇಬ್ಬರು ಪುರುಷರು, ಕೊಮಾರನಹಳ್ಳಿಯ ಪುರುಷ ಹಾಗೂ ಗೃಹಿಣಿಗೆ ಕೊರೊನಾ ದೃಢಪಟ್ಟಿದೆ.

ಪಟ್ಟಣದ ಪುರಸಭೆ ಸಿಬ್ಬಂದಿ ಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಕಚೇರಿಯ ಸಿಬ್ಬಂದಿ, ಪೌರಕಾರ್ಮಿಕರು, ಗುತ್ತಿಗೆ ನೌಕರರಿಗೆ ಪರೀಕ್ಷೆಗೆ ಗಂಟಲು, ಮೂಗಿನ ದ್ರವ ಸಂಗ್ರಹಿಸಿದರು.

ಮಲೇಬೆನ್ನೂರು ಪಟ್ಟಣ ಹಾಗೂ ನಂದಿತಾವರೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮೂರು ತಂಡ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಿದೆ.

ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ, ಕಂದಾಯಾಧಿಕಾರಿ ಪ್ರಭು, ಪರಿಸರ ಎಂಜಿನಿಯರ್ ಉಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಗುರು ಪ್ರಸಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು