ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ದಾಟಿದ ಸೋಂಕಿತರ ಸಂಖ್ಯೆ

321 ಮಂದಿಗೆ ಕೊರೊನಾ, 95 ವರ್ಷದ ವೃದ್ಧೆ ಸೇರಿ 119 ಮಂದಿ ಗುಣಮುಖ
Last Updated 2 ಸೆಪ್ಟೆಂಬರ್ 2020, 15:58 IST
ಅಕ್ಷರ ಗಾತ್ರ

ದಾವಣಗೆರೆ:ಜಿಲ್ಲೆಯಲ್ಲಿ 321 ಮಂದಿಗೆ ಕೊರೊನಾ ಇರುವುದು ಬುಧವಾರ ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ.

ಹರಿಹರ ಬಿಕೆಎಂ ರಸ್ತೆಯ 70 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆ ಮತ್ತು ಮಧುಮೇಹದಿಂದ ಮೃತಪಟ್ಟಿದ್ದಾರೆ.

13 ಬಾಲಕರು, 6 ಬಾಲಕಿಯರು, 42 ವೃದ್ಧರು, 19 ವೃದ್ಧೆಯರಿಗೆ ಕೊರೊನಾ ಇರುವುದು ಖಚಿತವಾಗಿದೆ. 18ರಿಂದ 59 ವರ್ಷದೊಳಗಿನ 140 ಪುರುಷರಿಗೆ 101 ಮಹಿಳೆಯರಿಗೆ ಸೋಂಕು ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 138 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ಎಲೆಬೇತೂರು, ಬಸಾಪುರ, ಅತ್ತಿಗೆರೆ, ಬೆಳವನೂರು ಹೀಗೆ ಸುಮಾರು 10 ಮಂದಿ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಉಳಿದವರು ಪಾಲಿಕೆ ವ್ಯಾಪ್ತಿಯವರು. ಪಿ.ಜೆ. ಬಡಾವಣೆ, ಸರಸ್ವತಿ ನಗರ, ರವೀಂದ್ರನಾಥ ಬಡಾವಣೆ, ಜಯನಗರ, ನಿಟುವಳ್ಳಿ, ಶಾಮನೂರು, ವಿನೋಬನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಮೂವರು, ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿರುವ ಐವರು, ಪಿಡಬ್ಲ್ಯುಡಿ ಕ್ವಾರ್ಟರ್ಸ್‌, ರೈಲ್ವೆ ಪೊಲೀಸ್‌, ವಿದ್ಯಾನಗರ ಪೊಲೀಸ್‌ ಠಾಣೆ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

ಹರಿಹರ ತಾಲ್ಲೂಕಿನ 58, ಚನ್ನಗಿರಿ ತಾಲ್ಲೂಕಿನ 57, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 50, ಜಗಳೂರು ತಾಲ್ಲೂಕಿನ 8 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಪನಹಳ್ಳಿಯ ಮೂವರು, ರಾಣೆಬೆನ್ನೂರಿನ ಇಬ್ಬರು, ಹಿರೆಕೆರೂರು, ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು, ಸಿರಿಗೆರೆಯ ತಲಾ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

119 ಮಂದಿ ಗುಣಮುಖರಾಗಿ ಬುಧವಾರ ಬಿಡುಗಡೆಗೊಂಡಿದ್ದಾರೆ. 95 ವರ್ಷದವರು ಸೇರಿ 22 ವೃದ್ಧೆಯರು, 23 ವೃದ್ಧರು, ಮೂವರು ಬಾಲಕರು ಅದರಲ್ಲಿ ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,097 ಮಂದಿಗೆ ಕೊರೊನಾ ಬಂದಿದೆ. 7484 ಮಂದಿ ಗುಣಮುಖರಾಗಿದ್ದಾರೆ. 196 ಮಂದಿ ಮೃತಪಟ್ಟಿದ್ದಾರೆ. 2417 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT