ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬಕ್ಕೆ ಪ್ರಾಣಿ,ಪಕ್ಷಿಗಳನ್ನು ದತ್ತು ಪಡೆದ ಯುವಕ

Published 15 ಮೇ 2024, 15:56 IST
Last Updated 15 ಮೇ 2024, 15:56 IST
ಅಕ್ಷರ ಗಾತ್ರ

ದಾನಿಹಳ್ಳಿ (ನ್ಯಾಮತಿ): ಇಲ್ಲಿನ ಯುವಕ ತನ್ನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ. ಅಳಿವಿನ ಅಂಚಿನಲ್ಲಿರುವ ಪಕ್ಷಿ ಮತ್ತು ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಜನ್ಮದಿನವನ್ನು ಸ್ಮರಣೀಯವಾಗಿಸಿದ್ದಾರೆ.

ಗ್ರಾಮದ ಶಶಿಧರಗೌಡ ಮತ್ತು ನಿರ್ಮಲಾ ದಂಪತಿ ಪುತ್ರ 26 ವರ್ಷದ ಜಿ.ಎಸ್.ಸಿದ್ಧಾರ್ಥ ಅವರು ಶಿವಮೊಗ್ಗದ ಹುಲಿ ಮತು ಸಿಂಹಧಾಮದಲ್ಲಿ ಜಾವ ಸ್ಪಾರೋ (ಜಾವ ಗುಬ್ಬಚ್ಚಿ) ಮತ್ತು ಇಂಡಿಯನ್ ಸ್ಟಾರ್ ಟಾರ್ಟೈಸ್‌ (ಭಾರತೀಯ ನಕ್ಷತ್ರ ಆಮೆ)ಗಳನ್ನು ಒಂದು ವರ್ಷ ಅವಧಿಗೆ ದತ್ತು ತೆಗೆದುಕೊಂಡಿದ್ದಾರೆ.

ಈ ಪ್ರಬೇಧದ ಗುಬ್ಬಚ್ಚಿ ಮತ್ತು ಆಮೆಗಳು ಪ್ರಪಂಚದಾದ್ಯಂತ 10,000 ಮಾತ್ರ ಇವೆ ಎಂದು ಐಯುಸಿಎನ್ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ.

‘ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಮ್ಮ ಮಗ ದತ್ತು ಪಡೆದಿದ್ದಾನೆ’ ತಂದೆ ತರಳಬಾಳು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶಶಿಧರಗೌಡ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT