ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯ ಅಗತ್ಯ’

ಕಸಾಪ ವತಿಯಿಂದ ಎರಡನೇ ಸಾಹಿತ್ಯ ಸೌರಭ ಕಾರ್ಯಕ್ರಮ
Published 12 ಮೇ 2024, 16:22 IST
Last Updated 12 ಮೇ 2024, 16:22 IST
ಅಕ್ಷರ ಗಾತ್ರ

ನ್ಯಾಮತಿ: ತಾಲ್ಲೂಕಿನ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಪ್ರತಿ ತಿಂಗಳು ಸಾಹಿತ್ಯ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 2ನೇ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಹಿರಿಯ ಮತ್ತು ಕಿರಿಯ ವಿವಿಧ ಪ್ರತಿಭಾವಂತರು ಎಲೆಯಮರೆಯ ಕಾಯಿಯಂತೆ ಇದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ ಶಿಕ್ಷಣ, ವ್ಯವಸಾಯ, ಆರೋಗ್ಯ, ಯೋಗ, ಕಥೆ, ಕವನ ಹೀಗೆ ಹಲವಾರು ಪ್ರತಿಭೆಗಳಿಗೆ ಮುಕ್ತ ಅವಕಾಶ ಇದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ತಿಳಿಸಿದರು. 

ಕಾರ್ಯಕ್ರಮದಲ್ಲಿ ಸ್ವರಚಿತ ಕವನ ವಾಚನ, ಕಥೆಗಳು, ಕೃಷಿ, ಹಿಂದಿನ ಹಬ್ಬಗಳ ಆಚರಣೆ, ಪತ್ರಿಕೋದ್ಯಮ ಕುರಿತು ಸದಸ್ಯರು ಅಭಿಪ್ರಾಯ ಹಂಚಿಕೊಂಡರು. 

ಬೆಳಗುತ್ತಿ ಹೋಬಳಿ ಕಸಾಪ ಅಧ್ಯಕ್ಷ ಎಂ.ಜಿ.ಕವಿರಾಜ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಪತ್ರಕರ್ತ ಎಚ್.ಶಿವಾನಂದಪ್ಪ, ವೆಂಕಟೇಶನಾಯ್ಕ, ಮಹಿಳಾ ಸಂಚಾಲಕಿ ಈ.ಸುಮಲತಾ, ಕವಿತಾ ಬಳಿಗಾರ, ರೇಖಾ ಗಜಾನನ, ಎನ್.ಬಿ. ಅಂಬಿಕಾ, ಪುಷ್ಪಲತಾ, ಉಮಾದೇವಿ, ಆರುಂಡಿ ಕರಿಗೌಡರ ನಾಗರಾಜಪ್ಪ, ಕೆ. ಮಂಜಪ್ಪ, ಸೈಯದ್ ಅಪ್ಸರ್‌ಬಾಷ, ಬಂಡಿ ಈಶ್ವರಪ್ಪ, ಜಿ.ಷಡಾಕ್ಷರಿ, ಫಾಲಾಕ್ಷಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT