ಭಾನುವಾರ, ಏಪ್ರಿಲ್ 18, 2021
26 °C
ಜನರ ಮೆಚ್ಚುಗೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇರುವ ಈ ಶೌಚ ಗೃಹ

ದಾವಣಗೆರೆ: ಹಳೇ ಬಸ್ಸಾಯಿತು ಇಲ್ಲಿ ಹೊಸ ಶೌಚಾ‌ಲಯ

ರೇವಣಸಿದ್ದಪ್ಪ ಎಸ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಂಪು ಬಸ್‌ವೊಂದು ನಿಂತಿದೆ. ನಮ್ಮೂರಿನ ಕಡೆ ಆ ಬಸ್ ಹೋಗುತ್ತದೆ ಎಂದು ಭಾವಿಸಿ ಬಸ್ಸಿನತ್ತ ಹೋದರೆ ಅಲ್ಲಿ ಸಿಗುವುದು ಮಹಿಳೆಯರ ಹೈಟೆಕ್ ಶೌಚಾಲಯ.

ಶೌಚಾಲಯಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಕಟ್ಟಡಗಳಲ್ಲಿ ನಿರ್ಮಿಸುವುದು ಸಾಮಾನ್ಯ. ಆದರೆ ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿ ಇರುವ ತಾತ್ಕಾಲಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಈ ಬಸ್‌ ಶೌಚಾಲಯ ಕಂಡು ಬಂದಿದೆ. ಅಧಿಕಾರಿಗಳು ಅನುಪಯುಕ್ತ ಬಸ್‌ವೊಂದನ್ನು ಶೌಚ ಗೃಹವಾಗಿ ಮಾರ್ಪಡಿಸಿ, ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಮಹಿಳೆಯರ ಶೌಚಾಲಯವನ್ನಾಗಿ ಮಾರ್ಪಡಿಸಿದ್ದಾರೆ.

ಹಾಳಾದ ಬಸ್‌ಗೆ ಹೊಸ ರೂಪ: ಈ ಬಸ್ 2011ರಲ್ಲಿ ಸಾರಿಗಾಗಿ ರಸ್ತೆಯಲ್ಲಿ ಓಡಾಡುತ್ತಿತ್ತು. ಕಳೆದ ವರ್ಷದಿಂದ ಸಂಪೂರ್ಣ ಹಾಳಾಗಿ ಗುಜರಿಗೆ ಹಾಕುವ ಸ್ಥಿತಿಗೆ ತಲುಪಿತ್ತು. ಆದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಆ ಬಸ್‌ ಅ‌ನ್ನು ಗುಜರಿಗೆ ಹಾಕದೆ ಕಸದಿಂದ ರಸವನ್ನು ತೆಗೆಯಬೇಕು ಎಂಬ ಉದ್ದೇಶದಿಂದ ಬಸ್‌ ಅ‌ನ್ನು ಹೈಟೆಕ್ ಶೌಚಾಲಯಕ್ಕೆ ಬಳಸಿಕೊಂಡಿದ್ದಾರೆ. ಈ ಮೂಲಕ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

₹7 ಲಕ್ಷ ವೆಚ್ಚದಲ್ಲಿ ಬಸ್ ಶೌಚಾಲಯ: ಹಾಳಾದ ಬಸ್‌ ಅನ್ನು ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂದು ಯೋಜಿಸಿದ ಅಧಿಕಾರಿಗಳು ₹ 7 ಲಕ್ಷ ವೆಚ್ಚದಲ್ಲಿ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡು ಹೈಟೆಕ್ ಮಾದರಿ ಶೌಚಾಲಯವನ್ನಾಗಿ ಮಾರ್ಪಡಿಸಿದ್ದಾರೆ.

ಏನೇನು ಸೌಲಭ್ಯ: ಈ ಬಸ್‌ ಶೌಚಾಲಯದಲ್ಲಿ ಮಹಿಳೆಯರಿಗಾಗಿ 3 ಇಂಡಿಯನ್ ಶೌಚಾಲಯ, ಒಂದು ವೆಸ್ಟರ್ನ್ ಮಾದರಿ ಶೌಚಾಲಯ. ಮಕ್ಕಳಿಗೆ ಎದೆಹಾಲು ಉಣಿಸಲು ಮತ್ತು ವಿಶ್ರಾಂತಿ ಪಡೆಯಲು ವಿಶೇಷ ಕೊಠಡಿ ಇದೆ. ಶೌಚಾಲಯದಲ್ಲಿ ನೀರಿಗೆ ತೊಂದರೆ ಆಗದಂತೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.