ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೊತೆಗೆ ಇದ್ದವರೇ ಕುತ್ತಿಗೆ ಕೊಯ್ಯುತ್ತಾರೆ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Published : 1 ಸೆಪ್ಟೆಂಬರ್ 2024, 20:47 IST
Last Updated : 1 ಸೆಪ್ಟೆಂಬರ್ 2024, 20:47 IST
ಫಾಲೋ ಮಾಡಿ
Comments

ಹೊಳೆಹೊನ್ನೂರು (ಶಿವಮೊಗ್ಗ): ‘ಜೊತೆಗೆ ಇದ್ದವರೇ ಕುತ್ತಿಗೆ ಕೊಯ್ಯುತ್ತಾರೆ. ಆದ್ದರಿಂದ ಮಠದ ನಿಜ ಭಕ್ತರು ತುಂಬಾ ಜಾಗರೂಕರಾಗಿರಬೇಕು’ ಎಂದು ತರಳಬಾಳು ಮಠದ ‌ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 

ಸಮೀಪದ ನಾಗತಿಬೆಳಗಲು ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 32ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಠದ ವಿಚಾರವನ್ನು ಹಾದಿ ಬೀದಿಯಲ್ಲಿ ಮಾತನಾಡುವವರು ಮಠದ ಪಾಲಿಗೆ ದೃಷ್ಟಿ ಬೊಟ್ಟು ಇದ್ದಂತೆ. ಅವಹೇಳನದ ಮಾತುಗಳು ವಿಷದ ಮನಸ್ಸುಗಳ ಸ್ವಾರ್ಥ ಭಕ್ತಿಯನ್ನು ತೋರಿಸುತ್ತವೆ. ಸ್ವಾರ್ಥ ಈಡೇರದಿದ್ದರೆ ಮಠದ ವಿರುದ್ಧ ಬುಸುಗುಡುತ್ತಾರೆ’ ಎಂದಿದ್ದಾರೆ. ‘ಹಿಂದೆ ದೊಡ್ಡ ಗುರುಗಳನ್ನು ದೂಷಿಸಿದ ಶನಿ ಸಂತಾನವೇ ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದೆ. ಕೆಲವರು ತಮ್ಮ ತೆವಲು ತೀರಿಸಿಕೊಳ್ಳಲು ತೆರೆ ಮರೆಯಲ್ಲಿ ಸ‌ಂಚು ರೂಪಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT