ದಾವಣಗೆರೆ: ರಕ್ತ ಹೆಪ್ಪುಗಟ್ಟದಿರುವಂತಹ ಸಮಸ್ಯೆ ತಂದೊಡ್ಡುವ ಕುಸುಮರೋಗ (ಹಿಮೋಫಿಲಿಯಾ) ದಿಂದ ಬಳಲುತ್ತಿರುವವರಿಗೆ ರಾಜ್ಯದಲ್ಲೇ ಮೊದಲ ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಸೇವೆ ಒದಗಿಸುತ್ತಿರುವ ವೈದ್ಯ ಡಾ.ಸುರೇಶ್ ಹನಗವಾಡಿ ಅವರಿಗೆ ‘ಪದ್ಮಶ್ರೀ’ ಒಲಿದುಬಂದಿದೆ.

ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಸುರೇಶ್, ಸ್ವತಃ ಹಿಮೋಫಿಲಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕಂದಿನಿಂದ ‘ಹಿಮೋಫಿಲಿಯಾ’ ವಿರುದ್ಧ ನಡೆಸಿದ ಹೋರಾಟ ಅವರನ್ನು ವೈದ್ಯರನ್ನಾಗಿ ರೂಪಿಸಿದೆ. ವೈದ್ಯಕೀಯ ವೃತ್ತಿಯ ಬಹುತೇಕ ಸಮಯವನ್ನು ಈ ರೋಗಿಗಳ ಆರೈಕೆಗೆ ಮೀಸಲಿಟ್ಟಿದ್ದಾರೆ.

ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ಜನಿಸಿರುವ ಇವರು, 1989–90ರಲ್ಲಿ ದಾವಣಗೆರೆಯಲ್ಲಿ ‘ಕರ್ನಾಟಕ ಹಿಮೋಫಿಲಿಯಾ ಸೊಸೈಟಿ’ ಸ್ಥಾಪಿಸಿದರು. ರಕ್ತಕ್ಕೆ ಸಂಬಂಧಿಸಿದ ಎಲ್ಲ ವಿರಳ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗುವಂತೆ ಮಾಡಿದರು. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳ ಆರೈಕೆಯಲ್ಲಿ ಸುಧಾರಣೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಗತ್ಯ ಸಮಯಕ್ಕೆ ರಕ್ತ, ದುಬಾರಿ ಬೆಲೆಯ ಔಷಧ, ಚಿಕಿತ್ಸೆ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸೊಸೈಟಿಗೆ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆರವಾಗಿದ್ದರು. 1999ರಲ್ಲಿ ಮೊದಲ ಬಾರಿಗೆ ‘ಹಿಮೋಫಿಲಿಯಾ’ ನಿಧಿ ಸಂಗ್ರಹಕ್ಕಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಎರಡು ದಶಕಗಳವರೆಗೆ ಪ್ರತಿ ವರ್ಷವೂ ‘ಹಿಮೋಫಿಲಿಯಾ’ ರೋಗಿಗಳಿಗೆ ತನ್ನ ಕಂಠ ಸಿರಿಯ ಮೂಲಕ ನೆರವಾಗಿದ್ದರು. ಡಾ.ಸುರೇಶ್ ಅವರ ಪತ್ನಿ, ಮನೋವಿಜ್ಞಾನಿ ತಜ್ಞೆ ಮೀರಾ ಹನಗವಾಡಿ ಸೊಸೈಟಿಯನ್ನು ಮುನ್ನಡೆಸುತ್ತ ಪತಿಯ ಅನನ್ಯ ಸೇವೆಗೆ ಕೈಜೋಡಿಸಿದ್ದಾರೆ.

‘ಹಿಮೋಫಿಲಿಯಾ ಸಮಸ್ಯೆಯಿಂದ ಬಳಲುವವರು ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ತೀರಾ ವಿರಳವಾದ ಈ ಕಾಯಿಲೆಯನ್ನು ಪತ್ತೆ ಮಾಡಲು ನಿಧಾನವಾದರೆ ತೊಂದರೆ ಹೆಚ್ಚು. ತ್ವರಿತ ರೋಗಪತ್ತೆ ಹಾಗೂ ಪರಿಣಾಮಕಾರಿ ಚಿಕಿತ್ಸೆಯಿಂದ ಅಂಗವೈಕಲ್ಯವನ್ನು ತಪ್ಪಿಸಬಹುದು’ ಎಂಬುದು ಡಾ.ಸುರೇಶ್ ಹನಗವಾಡಿ ಅವರ ಬಲವಾದ ನಂಬಿಕೆ.

ಡಾ.ಸುರೇಶ್ ಹನಗವಾಡಿ ಅವರಿಗೆ ‘ಅಂಗವಿಕಲರ ಸಬಲೀಕರಣಕ್ಕಾಗಿನ ರಾಷ್ಟ್ರೀಯ ಪ್ರಶಸ್ತಿ’ಯು ‘ಶ್ರೇಷ್ಠ ದಿವ್ಯಾಂಗಜನ’ ವಿಭಾಗದಲ್ಲಿ 2024ರಲ್ಲಿ ಲಭಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದರು.

ನಾಲ್ಕು ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ದೇಶದಾದ್ಯಂತ ಕುಸುಮರೋಗದಿಂದ ಬಳಲುತ್ತಿರುವರಿಗೆ ಇದರಿಂದ ಉತ್ತಮ ಚಿಕಿತ್ಸೆ ಸಿಗಲು ಸಹಕಾರಿ ಆಗಲಿದೆ ಎಂದು ಭಾವಿಸಿದ್ದೇನೆ
ಡಾ.ಸುರೇಶ್ ಹನಗವಾಡಿ, ಪದ್ಮಶ್ರೀಗೆ ಆಯ್ಕೆಯಾಗಿರುವ ವೈದ್ಯ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.