ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ ಬರುತ್ತಿದ್ದರು; ಹೊರ ಜಿಲ್ಲೆಯಿಂದ ಬರುವವರ ಕಥೆ

ಹೊರ ಜಿಲ್ಲೆಯಿಂದ ಬರುವವರ ಕಥೆ ವಿವರಿಸಿದ ಸೇವಾ ಸಿಂಧು ತಂಡ
Last Updated 22 ಜುಲೈ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಸೇವಾ ಸಿಂಧುವಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ಬಳಿಕ ಯಾವಾಗ ಬರುತ್ತಾರೆ ಎಂಬುದನ್ನು ಮಾಹಿತಿ ನೀಡದೇ ಮೊಬೈಲ್‌ ಸ್ವಿಚ್‌ಡ್‌ ಆಫ್‌ ಮಾಡಿ ಬಂದು ಬಿಡುತ್ತಿದ್ದರು.

ಜಿಲ್ಲೆಯಿಂದ ಹೋಗುವ ಮತ್ತು ಜಿಲ್ಲೆಗೆ ಬರುವವರ ನಿಗಾ ಇರಿಸಲು ಇದ್ ಸೇವಾ ಸಿಂಧು ವಿಭಾಗ ನೋಡಲ್‌ ಅಧಿಕಾರಿ, ಡಿಡಿಎಲ್ಆರ್‌ ರಾಮಾಂಜನೇಯ, ಸೇವಾ ಸಿಂಧು ಮ್ಯಾನೇಜರ್‌ ಶಾಂತರಾಜ್‌, ಸೇವಾಸಿಂಧು ಸರ್ವೇಯರ್‌ ಶಾಂತಲಾ ಅವರ ಅನುಭವದ ಇದು.

‘ಏಪ್ರಿಲ್‌, ಮೇ ತಿಂಗಳಲ್ಲಿ ಸೇವಾ ಸಿಂಧುವಿನಲ್ಲಿ ಅರ್ಜಿ ಭರ್ತಿ ಮಾಡಿ 5900 ಮಂದಿ ವಿವಿಧ ರಾಜ್ಯಗಳಿಗೆ, ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋದರು. 268 ಮಂದಿ ಹೆಸರು ನೋಂದಾಯಿಸಿ ಹೊರರಾಜ್ಯಗಳಿಂದ ನಮ್ಮಲ್ಲಿಗೆ ಬಂದರು. ಹಲವು ಮಂದಿ ಹೆಸರು ನೋಂದಾಯಿಸಿ ಬಳಿಕ ಮೊಬೈಲ್‌ ಸ್ವಿಚ್‌ಡ್‌ ಆಫ್‌ ಮಾಡಿ ಬಂದರು. ಅವರನ್ನೆಲ್ಲ ‍ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಯಿತು. ಇದಲ್ಲದೇ 178 ಮಂದಿ ಯಾವುದೇ ಮಾಹಿತಿ ನೀಡಿದೇ ಹೊರಗಿನಿಂದ ನಮ್ಮ ಜಿಲ್ಲೆಗೆ ಬಂದರು. ಅವರನ್ನೂ ಪತ್ತೆ ಹಚ್ಚಲಾಯಿತು’ ಎಂದು ವಿವರಿಸಿದರು.

ರೈಲು ಬರುವ ಸಮಯ ನೋಡಿ ರೈಲು ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳಬೇಕಿತ್ತು. ರೈಲಿನಲ್ಲಿ ಬಂದು ಇಳಿಯುವ ಪ್ರಯಾಣಿಕರನ್ನು ಹಾಗೇ ಸೇವಾ ಸಿಂಧು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರ ಹೆಸರು ನೋಂದಾಯಿಸಿ ಕ್ವಾರಂಟೈನ್‌ಗೆ ಕಳುಹಿಸಬೇಕಾಯಿತು ಎಂದು ಮಾಹಿತಿ ನೀಡಿದರು.

ವಾರ್‌ರೂಂನ ಒಂದು ಉಪವಿಭಾಗ ಆಗಿರುವ ಸೇವಾ ಸಿಂಧುವನ್ನು ಸಿಇಒ ಪದ್ಮ ಬಸವಂತಪ್ಪ ಅವರ ಮೇಲ್ವಿಚಾರಣೆಯಲ್ಲಿತ್ತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ಪೂಜಾರ ವೀರಮಲ್ಲಪ್ಪ ಅವರು ಸೇವಾ ಸಿಂಧುಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಸಹಕಾರ ನೀಡಿದರು. ನಗರಾಭಿವೃದ್ಧಿ ಯೋಜನಾಧಿಕಾರಿ ನಜ್ಮಾ ಬೆಂಬಲ ನೀಡಿದರು ಎಂದು ನೆನಪಿಸಿಕೊಂಡರು.

‘ಯಾರು ಬರುತ್ತಾರೆ ಎಂದು ನಿಗಾ ಇಡುವ ಕೆಲಸ ಆಗಿರುವುದರಿಂದ ನಾವು ಮನೆಗೆ ಹೋಗಿ ಬರುತ್ತಿದ್ದೆವು. ಹೊರಗೆ ಅಡ್ಡಾಡುವುದು ಕಡಿಮೆ ಆದರೆ, ಬೇರೆ ಕಡೆ ಹೋಗಲು ಅನುಮತಿಗಾಗಿ ಬರುವವರು ಹೆಚ್ಚಿದ್ದರು. ಈಗ ಸೇವಾ ಸಿಂಧುವಿನಲ್ಲಿ ಅವರು ಎಲ್ಲಿದ್ದಾರೋ ಅಲ್ಲಿಂದಲೇ ಭರ್ತಿ ಮಾಡುವ ಅವಕಾಶ ಇದೆ. ಈಗ ಸಮಸ್ಯೆಯಾಗಿ ಉಳಿದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT