ಗುರುವಾರ , ಮೇ 19, 2022
25 °C

ಹೊಸ ಮನೆಗೆ ಮೋದಿ ಹೆಸರಿಟ್ಟ ಅಭಿಮಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಪಟ್ಟಣದ ನಿವಾಸಿ ಗೌಡ್ರ ಹಾಲೇಶ್ ಕಟ್ಟಿಸಿದ ಹೊಸ ಮನೆಗೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಇಟ್ಟು ನಾಮಕರಣ ಮಾಡಿ ತಾಲ್ಲೂಕಿನ ಜನರ ಗಮನ ಸೆಳೆದಿದ್ದಾರೆ.

ಹಾಲೇಶ್ ಆರ್‌ಎಸ್ಎಸ್ ಕಾರ್ಯಕರ್ತರಾಗಿದ್ದು, ಅನೇಕ ವರ್ಷಗಳಿಂದ ಬಿಜೆಪಿಗಾಗಿ
ದುಡಿಯುತ್ತಿದ್ದಾರೆ. ಇವರು ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿಯ ತೋಟದಲ್ಲಿ ಹೊಸ ಮನೆ ಕಟ್ಟಲು ತೀರ್ಮಾನಿಸಿದರು. ಅದರಂತೆ ₹ 42 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ನೂತನ ಮನೆಯೊಂದನ್ನು ನಿರ್ಮಿಸಿದರು.

ಹೊಸ ಮನೆ ಕಟ್ಟಿದ ಮೇಲೆ ಆ ಮನೆಗೆ ಯಾವುದಾದರೂ ಹೆಸರನ್ನು ನಾಮಕರಣ ಮಾಡುವುದು ಸಂಪ್ರದಾಯ. ಸಾಮಾನ್ಯವಾಗಿ ತಾವು ನಿರ್ಮಿಸಿದ ಹೊಸ ಮನೆಗೆ ಮನೆ ದೇವರು, ಮಕ್ಕಳು ಅಥವಾ ತಂದೆ ತಾಯಿಗಳ ಹೆಸರನ್ನು ನಾಮಕರಣ ಮಾಡುತ್ತಾರೆ. ಆದರೆ ಪಕ್ಕಾ ನರೇಂದ್ರ ಮೋದಿಯವರ ಅಭಿಮಾನಿಯಾದ ಇವರು ತಾವು ಕಟ್ಟಿಸಿದ ಹೊಸ ಮನೆಗೆ ‘ಶ್ರೀ ನರೇಂದ್ರ ಮೋದಿ ನಿಲಯ’ ಎಂಬ ಹೆಸರು ಇಟ್ಟಿದ್ದಾರೆ.

ನರೇಂದ್ರ ಮೋದಿ ನಿಲಯದ ಉದ್ಘಾಟನೆಯನ್ನು ಮೇ. 3ರಂದು ಬಸವ ಜಯಂತಿಯ ದಿನ ಉದ್ಘಾಟಿಸಲು ತೀರ್ಮಾನಿಸಿದ್ದಾರೆ. ಈಗ ನರೇಂದ್ರ ಮೋದಿ ನಿಲಯವನ್ನು ನೋಡಲು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರು ಬರುತ್ತಿದ್ದಾರೆ. ಈ
ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರ ಅಭಿಮಾನಿಗಳಿಗೆ ಮಾತ್ರ ಆಹ್ವಾನವಿದೆ.

‘ನರೇಂದ್ರ ಮೋದಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ ದಿನದಿಂದಲೂ ಅವರನ್ನು ಗಮನಿಸುತ್ತಾ ಬಂದಿದ್ದೆ. ಅವರು  ಪ್ರಧಾನಿಯಾದ ಮೇಲೆ ಇನ್ನಷ್ಟು ಪ್ರೀತಿ ಬೆಳೆಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ಧುಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಕೊರೊನಾವನ್ನು ಹಿಮ್ಮೆಟ್ಟಿಸಲು ದೇಶದ ಜನರಿಗೆ ಉಚಿತ ಲಸಿಕೆ ನೀಡಿ ದೇಶದ ಒಳಿತಿಗಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಇಡೀ ವಿಶ್ವವೇ ಗಮನಸೆಳೆಯುವಂತೆ ಮಾಡಿದ್ದಾರೆ. ಇದರಿಂದ ಅವರು ತುಂಬ ಇಷ್ಟ. ಹಾಗಾಗಿ ನರೇಂದ್ರ ಮೋದಿ ಹೆಸರನ್ನು ಇಟ್ಟಿದ್ದೇನೆ. ನರೇಂದ್ರ ಮೋದಿ ಅಭಿಮಾನಿಗಳಿಗೆ ಮಾತ್ರ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ್ದೇನೆ’ ಎಂದು ಗೌ. ಹಾಲೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು