ದಾವಣಗೆರೆ: 170 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ಅಂಚೆ, ಹೊಸ ತಂತ್ರಾಂಶ ಅಳವಡಿಸಿಕೊಂಡು ಇದೇ 23ರಿಂದ ಜನರಿಗೆ ಇನ್ನಷ್ಟು ವೇಗದ ಸೇವೆ ನೀಡಲು ಸಜ್ಜಾಗಿದೆ.

‘ಐ.ಟಿ 2.0’ ಹೆಸರಿನ ಹೊಸ ತಂತ್ರಾಂಶವನ್ನು ಅಂಚೆ ಇಲಾಖೆ ಅಳವಡಿಸಿಕೊಂಡಿದೆ. ಹಳೆಯದಾಗಿರುವ ‘ಎಸ್ಎಪಿ’ ಹೆಸರಿನ ತಂತ್ರಾಂಶ ಹಾಗೂ ನೆಟ್ವರ್ಕ್ ಸೇವೆ ಒದಗಿಸುತ್ತಿರುವ ‘ಸಿಫಿ’ಯನ್ನು ಕೈಬಿಡಲಾಗಿದೆ. ಅಂಚೆ ಇಲಾಖೆಗೆ ಸಂಬಂಧಿಸಿದ ‘ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ’ (ಸಿಇಪಿಟಿ) ವಿಭಾಗವು ಸಂಸ್ಥೆಗಾಗಿ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶವು ಅತ್ಯಾಧುನಿಕವಾಗಿದ್ದು, ನಿರೀಕ್ಷೆ ಮೂಡಿಸಿದೆ.

‘ಮೈಸೂರಿನ ಇಟ್ಟಿಗೆಗೂಡು ಉಪ ಅಂಚೆ ಕಚೇರಿಯಲ್ಲಿ ಈ ಹಿಂದೆ ತಂತ್ರಾಂಶದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ನಂತರ ಇಡೀ ಮೈಸೂರು ವಿಭಾಗಕ್ಕೆ ಅದನ್ನು ವಿಸ್ತರಿಸಲಾಗಿತ್ತು. ಜೂನ್ 17ರಂದು ಬಾಗಲಕೋಟೆ ಹಾಗೂ ರೈಲ್ವೆ ಮೇಲ್ ಸರ್ವೀಸ್ನಲ್ಲಿ (ಆರ್ಎಂಎಸ್) ಪ್ರಯೋಗಾರ್ಥ ಪರೀಕ್ಷೆ ನಡೆದಿದೆ. ಈ ಯಶಸ್ಸಿನ ಬಳಿಕ ಜೂನ್ 23ರಂದು ರಾಜ್ಯದ ಪ್ರತೀ ವಿಭಾಗದ (ಡಿವಿಷನ್) ಒಂದು ಮುಖ್ಯ ಅಂಚೆ ಕಚೇರಿ ಹಾಗೂ ಅದರ ಅಡಿಯಲ್ಲಿರುವ ಎಲ್ಲ ಉಪ ಕಚೇರಿಗಳಲ್ಲಿ ಹೊಸ ತಂತ್ರಾಂಶದ ಮೂಲಕ ಅಧಿಕೃತವಾಗಿ ಅಂಚೆ ಇಲಾಖೆ ಕೆಲಸ ಶುರು ಮಾಡಲಿದೆ’ ಎಂದು ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಸಹಾಯಕ ಅಧೀಕ್ಷಕ ಗುರುಪ್ರಸಾದ್ ಜೆ.ಎಸ್. ಮಾಹಿತಿ ನೀಡಿದರು.

‘ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಪ್ರಧಾನ ಅಂಚೆ ಕಚೇರಿಗಳು ಹಾಗೂ ಅವುಗಳ ಅಡಿಯಲ್ಲಿರುವ ಉಪ ಅಂಚೆ ಕಚೇರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಮತ್ತು ಸಾಗರ ಪ್ರಧಾನ ಅಂಚೆ ಕಚೇರಿಗಳ ಪೈಕಿ ಒಂದರಲ್ಲಿ 23ರಂದೇ ಹೊಸ ತಂತ್ರಾಂಶದ ಅಡಿಯಲ್ಲಿ ಸೇವೆಗಳು ದೊರೆಯಲಿವೆ. ದಾವಣಗೆರೆ ಜಿಲ್ಲೆಯ ಪ್ರಧಾನ ಕಚೇರಿ, 46 ಉಪ ಅಂಚೆ ಕಚೇರಿಗಳು ಹಾಗೂ 214 ಶಾಖಾ ಕಚೇರಿಗಳಲ್ಲಿ ಏಕಕಾಲಕ್ಕೆ ಜಾರಿಯಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಎರಡು ದಿನ ಸೇವೆ ವ್ಯತ್ಯಯ: ಅಂತಿಮ ಸಿದ್ಧತೆ ಕಾರಣ, ಅಂಚೆ ಕಚೇರಿಗಳಲ್ಲಿ ಜೂನ್ 20 ಮತ್ತು 21ರಂದು ಗ್ರಾಹಕರಿಗೆ ಬಹುತೇಕ ಸೇವೆಗಳು ಸಿಗುವುದಿಲ್ಲ. ಕಚೇರಿ ತೆರೆದಿರುತ್ತದೆಯಾದರೂ, ವಹಿವಾಟು ಇರುವುದಿಲ್ಲ. ವಿಚಾರಣೆಯಂತಹ ಕೆಲ ಸೇವೆಗಳು ಲಭ್ಯವಿರುತ್ತವೆ.

ಅಂಚೆ ಬಟವಾಡೆಗೆ ಹೊಸ ಆ್ಯಪ್: ಪೋಸ್ಟ್ಮ್ಯಾನ್ ಬಳಸುತ್ತಿರುವ ಆ್ಯಪ್ ಕೂಡ ಈ ಬಾರಿ ಹೊಸ ರೂಪ ಪಡೆದಿದೆ. ಪತ್ರಗಳನ್ನು ಮನೆಮನೆಗೆ ತಲುಪಿಸುವ ಅಂಚೆ ಸಿಬ್ಬಂದಿ, ಕಚೇರಿಗೆ ಬಂದ ಬಳಿಕ ಕಂಪ್ಯೂಟರ್ನಲ್ಲಿ ಅದನ್ನು ನಮೂದಿಸುವ ಪರಿಪಾಟ ಇದೆ. ನೆಟ್ವರ್ಕ್ ಕಾರಣಕ್ಕೆ ಕೆಲವೊಮ್ಮೆ ನಮೂದಿಸಲು ಸಾಧ್ಯವಾಗದಿದ್ದರೆ, ಪತ್ರ ತಲುಪಿದೆಯೇ, ಇಲ್ಲವೇ ಎಂಬುದರ ಕುರಿತು ‘ಟ್ರ್ಯಾಕಿಂಗ್’ನಲ್ಲಿ ನಿಖರ ಮಾಹಿತಿ ಸಿಗುತ್ತಿರಲಿಲ್ಲ. ಹೊಸ ತಂತ್ರಾಂಶದಲ್ಲಿ ಇದಕ್ಕೆ ಪರಿಹಾರ ನೀಡಲಾಗಿದೆ.

ಇಷ್ಟು ದಿನ ಅಂಚೆಯಣ್ಣ ಬಳಸುತ್ತಿದ್ದ ‘ಪೋಸ್ಟ್ ಮ್ಯಾನ್ ಮೊಬೈಲ್ ಆ್ಯಪ್’ ಬದಲು, ಅವರಿಗಾಗಿ ಎಂಎಂಎ (ಇಂಟರ್ನಲ್ ಮೊಬೈಲ್ ಆ್ಯಪ್) ಹೆಸರಿನ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅಂಚೆ ಸಿಬ್ಬಂದಿಯು ಮನೆಯೊಂದಕ್ಕೆ ಪತ್ರ ತಲುಪಿಸಿದ ಕೂಡಲೇ ಐಎಂಎ ಮೂಲಕ ‘ಡೆಲಿವರ್ಡ್’ ಎಂದು ನಮೂದಿಸಿದರೆ ಅದು ಎಲ್ಲ ಕಡೆಯೂ ಏಕಕಾಲಕ್ಕೆ ಅಪ್ಡೇಟ್ ಆಗುತ್ತದೆ. ಅಂಚೆ ಸೇವೆಯಲ್ಲಿ ವೇಗ ಹಾಗೂ ದಕ್ಷತೆ ತರಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

Quote - ಪ್ರಧಾನ ಅಂಚೆ ಕಚೇರಿ ಆರು ತಾಲ್ಲೂಕುಗಳ ಉಪ ಅಂಚೆ ಕಚೇರಿಗಳು ಹಾಗೂ ಶಾಖಾ ಅಂಚೆ ಕಚೇರಿಗಳು ಸೇರಿದಂತೆ ಇಲಾಖೆಯ ಎಲ್ಲ ಸಿಬ್ಬಂದಿಗೆ ಹಂತ ಹಂತವಾಗಿ ತರಬೇತಿ ನೀಡಲಾಗಿದೆ ಗುರುಪ್ರಸಾದ್ ಜೆ.ಎಸ್. ಸಹಾಯಕ ಅಧೀಕ್ಷಕ ಪ್ರಧಾನ ಅಂಚೆ ಕಚೇರಿ ದಾವಣಗೆರೆ

ನೆಟ್ವರ್ಕ್ ತಂತ್ರಾಂಶ ಸಮಸ್ಯೆಗೆ ಮದ್ದು

ನೆಟ್ವರ್ಕ್ ಸೇವೆಯಲ್ಲಿ ಪದೇಪದೇ ಎದುರಾಗುತ್ತಿದ್ದ ಅಡೆತಡೆಗಳು ಹಾಗೂ ‘ಸ್ಯಾಪ್’ ಹೆಸರಿನ ತಂತ್ರಾಂಶವು ಹಳೆಯದಾಗಿದ್ದ ಕಾರಣ ಜನರಿಗೆ ಸಕಾಲದಲ್ಲಿ ಅಂಚೆಯ ವಿವಿಧ ಸೇವೆಗಳನ್ನು ನೀಡಲು ಕಷ್ಟವಾಗುತ್ತಿತ್ತು. ರಿಜಿಸ್ಟರ್ ಪೋಸ್ಟ್ ಪೋಸ್ಟಲ್ ಆರ್ಡರ್ ಸ್ಟ್ಯಾಂಪ್ ಮಾರಾಟ ಸೇರಿದಂತೆ ಇತರೆ ಸೇವೆಗಳು ವಿಳಂಬವಾಗುತ್ತಿರುವ ಬಗ್ಗೆ ಜನರಿಂದಲೂ ಸಾಕಷ್ಟು ದೂರುಗಳಿದ್ದವು. ಈಗ ‘ಓಪನ್ ನೆಟ್ವರ್ಕ್’ಗೆ ಅಂಚೆ ಇಲಾಖೆ ತೆರೆದುಕೊಂಡಿದೆ. ಸ್ಥಳೀಯವಾಗಿ ಲಭ್ಯವಿರುವ ಬಿಎಸ್ಎನ್ಎಲ್ ಸೇರಿದಂತೆ ಯಾವುದೇ ಕಂಪನಿಯ ನೆಟ್ವರ್ಕ್ ಬಳಸಲು ಅವಕಾಶವಿದೆ. ಅಗತ್ಯವಿದ್ದರೆ ಮೊಬೈಲ್ ನೆಟ್ವರ್ಕ್ ಸಂಪರ್ಕಿಸಿಯೂ ಕೆಲಸ ಮುಂದುವರಿಸಲು ಹೊಸ ತಂತ್ರಾಂಶ ಅವಕಾಶ ನೀಡುತ್ತದೆ. ನೆಟ್ವರ್ಕ್ ಕಾರಣ ಹೇಳಿ ಗ್ರಾಹಕರನ್ನು ನಿರಾಸೆಗೊಳಿಸುವ ಪ್ರಮೇಯ ಇನ್ನು ಇರುವುದಿಲ್ಲ ಎನ್ನುತ್ತಾರೆ ಗುರುಪ್ರಸಾದ್ ಜೆ.ಎಸ್.

ಪಿನ್ ಕೋಡ್ ಬದಲು ‘ಡಿಜಿ ಪಿನ್’

ನಿಗದಿತ ಪ್ರದೇಶವೊಂದನ್ನು ಗುರುತಿಸಲು ಈಗ ಬಳಕೆಯಾಗುತ್ತಿರುವ ‘ಪಿನ್ಕೋಡ್’ ಇನ್ನು ಮುಂದೆ ‘ಡಿಜಿ ಪಿನ್’ ಎಂಬ ಹೊಸ ರೂಪ ತಾಳಲಿದೆ. ಪುಟ್ಟ ಜಾಗಗಳಿಗೂ ಪ್ರತ್ಯೇಕ ಡಿಜಿ ಪಿನ್ಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಈಗಿನ ವ್ಯವಸ್ಥೆಯಲ್ಲಿ ಹೋಬಳಿ ದೊಡ್ಡ ಗ್ರಾಮ ಅಥವಾ ಕೆಲವು ಗ್ರಾಮಗಳನ್ನು ಒಗ್ಗೂಡಿಸಿ ಪಿನ್ಕೋಡ್ ನೀಡಲಾಗಿದೆ. ಇದು ನಿಖರ ಅಂಚೆ ಸೇವೆ ಒದಗಿಸಲು ತೊಡಕಾಗಿದೆ. ಇನ್ನು ಮುಂದೆ 500 ಮೀಟರ್ ಸುತ್ತಳತೆಯ ಸಣ್ಣ ಪ್ರದೇಶಕ್ಕೂ ಪ್ರತ್ಯೇಕ ಡಿಜಿ ಪಿನ್ ಸೃಷ್ಟಿಸುವುದರಿಂದ ತ್ವರಿತ ಹಾಗೂ ಕರಾರುವಾಕ್ಕಾದ ಅಂಚೆ ಸೇವೆ ಸಿಗಲಿದೆ ಎಂಬುದು ಅಧಿಕಾರಿಗಳ ಮಾತು. ಈಗಾಗಲೇ ಜಾರ್ಖಂಡ್ ಹಾಗೂ ಮಹಾರಾಷ್ಟ್ರಗಳಲ್ಲಿ ಪೈಲಟ್ ಪ್ರಾಜೆಕ್ಟ್ ಶುರುವಾಗಿದೆ. ಅಂಕಿಗಳು ಹಾಗೂ ಇಂಗ್ಲಿಷ್ನ ಅಕ್ಷರಗಳನ್ನು ಒಳಗೊಂಡ 10 ಡಿಜಿಟ್ನ ಡಿಜಿ ಪಿನ್ ವ್ಯವಸ್ಥೆ ಕೆಲವು ತಿಂಗಳಲ್ಲಿ ದೇಶದಾದ್ಯಂತ ಜಾರಿಗೆ ಬರಲಿದೆ. ಇದರಿಂದ ಅಂಚೆ ವಿತರಣೆ ಮಾಡುವವರು ನಿಗದಿತ ಜಾಗವೊಂದನ್ನು ಹುಡುಕಿಕೊಂಡು ಹೋಗುವವರು ಹಾಗೂ ಜನ ಸಾಮಾನ್ಯರಿಗೂ ನೆರವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.