ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಲಯದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ 20ರಂದು

Last Updated 5 ಜನವರಿ 2020, 10:42 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಆರನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ ಆಯೋಜಿಸಲಾಗಿದೆ.

ಮೊದಲನೇ ಬಹುಮಾನ ₹ 50 ಸಾವಿರ, ಎರಡನೇ ಬಹುಮಾನ ₹ 30 ಸಾವಿರ, ಮೂರನೇ ಬಹುಮಾನ ₹ 10 ಸಾವಿರ, ನಾಲ್ಕನೇ ಬಹುಮಾನ ₹ 6,000 ಹಾಗೂ ಐದನೇ ಬಹುಮಾನ ₹ 4,000 ನೀಡಲಾಗುವುದು.

5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡಗಳು ಪಾಲ್ಗೊಳ್ಳಲು ಅವಕಾಶವಿದೆ. ಸ್ಪರ್ಧಿಗಳು ಶಾಲೆಗಳ ಮೂಲಕವೇ ಪಾಲ್ಗೊಳ್ಳಬೇಕು. ಪ್ರವೇಶ ಉಚಿತವಾಗಿದೆ.

ಆದಿತ್ಯ ಬಿರ್ಲಾ, ವೇದಾಂತ–ಸೀಸಾ ಗೋವಾ ಐರನ್‌ ಓರ್‌ ಕಂಪನಿ ಹಾಗೂ ಎಸ್‌ಬಿಐ ಸಹ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ.

ದಾವಣಗೆರೆ ವಲಯದ ರಸಪ್ರಶ್ನೆ ಸ್ಪರ್ಧೆಯು ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜನವರಿ 20ರಂದು ಬೆಳಿಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಬೆಳಿಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ವಲಯ ಮಟ್ಟದಲ್ಲಿ ಆಯ್ಕೆಯಾಗುವ ತಂಡಗಳಿಗೆ ಜನವರಿ 30ರಂದು ಬೆಂಗಳೂರಿನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.

ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಮಾಹಿತಿಗಾಗಿ ದಾವಣಗೆರೆ: ಪ್ರಕಾಶ್‌ ಎಸ್‌. – 9448914995, ಶಿವಮೊಗ್ಗ: ಎಸ್‌.ಕೆ. ಸಂಜೀವ್‌ಕುಮಾರ್‌ – 9606931790, ಚಿತ್ರದುರ್ಗ: ನಂದಗೋಪಾಲ – 9606912249 ಸಂಪರ್ಕಿಸಬಹುದು.

ನೋಂದಣಿ ಅರ್ಜಿಯನ್ನು ಇ–ಮೇಲ್‌ pvquizdvg@prajavani.co.in ಮೂಲಕವೂ ಶಾಲೆಯ ಮುಖ್ಯೋಪಾಧ್ಯಾಯರು/ಪ್ರಾಚಾರ್ಯರ ಮೂಲಕ ಕಳಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT