ದಾವಣಗೆರೆ: ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ದಾವಣಗೆರೆಯ ಆರು ಜನ ಹುತಾತ್ಮರಾದರು. ಎಲ್ಲಾ ಸರ್ಕಾರಗಳೂ ಆ ಹೋರಾಟಗಾರರನ್ನು ಸ್ಮರಿಸದಿರುವುದು ಅಪರಾಧವೇ ಸರಿ. ಸ್ವಾತಂತ್ರ್ಯ ಹೋರಾಟದಲ್ಲಿ ದಾವಣಗೆರೆ ನಗರದ ಕೊಡುಗೆ ದೊಡ್ಡದಿದೆ. ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಭಾರತದ ವಿಮೋಚನಾ ಕ್ರಾಂತಿಯಲ್ಲಿ ಹುತ್ಮಾತ್ಮರಾದ ದಾವಣಗೆರೆಯ ಆರು ಹೋರಾಟಗಾರರಿಗೆ ಗೌರವ ಅರ್ಪಣೆ ಮತ್ತು ಬೃಹತ್ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾತ್ಮಗಾಂಧಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಹಾಗೂ ಜವಾಹರ್ ಲಾಲ್ ನೆಹರು ಅವರು 1942ರಲ್ಲಿ ಕರೆ ಕೊಟ್ಟ ಕ್ವಿಟ್ ಇಂಡಿಯಾ ಚಳವಳಿಗಾಗಿ ದಾವಣಗೆರೆಯಲ್ಲಿ ಹೆಚ್ಚು ಜನ ಸೇರಿದ್ದರು. ಸಾವಿರಾರು ಜನರು ಹಳೇ ತಾಲ್ಲೂಕು ಕಚೇರಿಯಿಂದ ಹೋರಾಟ ಪ್ರಾರಂಭಿಸಿದ್ದರು. ರೈಲು ಹಳಿ ಕೀಳುವ ಸಂದರ್ಭದಲ್ಲಿ ಬ್ರಿಟೀಷರು ನಡೆಸಿದ ಗೋಲಿಬಾರ್ನಲ್ಲಿ ಆರು ಜನ ಪ್ರಾಣ ತೆತ್ತರು ಎಂದು ಸ್ಮರಿಸಿದರು.

ಹುತಾತ್ಮರಾದ ದಾವಣಗೆರೆಯ ಅಮಾಲಿ ತಿಮ್ಮಣ್ಣ, ಅಕ್ಷಾಲಿ ವಿರೂಪಾಕ್ಷಪ್ಪ, ಮಾಗನಹಳ್ಳಿ ಹನುಮಂತಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂತಪ್ಪ, ಹಳ್ಳೂರು ನಾಗಪ್ಪ ಅವರ ಹೆಸರನ್ನು ನಗರದ ಪ್ರಮುಖ ಸ್ಥಳಗಳಿಗೆ ಇಡಬೇಕು ಎಂದು ಒತ್ತಾಯಿಸಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಆರು ಜನರ ಹೆಸರು ದಾವಣಗೆರೆಯಲ್ಲಿ ಎಲ್ಲೂ ಕಾಣ ಸಿಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಸರ್ಕಾರಿ ಜಾಗಗಳಲ್ಲಿ ಬದುಕಿರುವವರ ಹೆಸರುಗಳನ್ನು ಇಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕೆಲವರು ಬದುಕಿರುವಾಗಲೇ ತಮ್ಮ ಹೆಸರುಗಳನ್ನು ಸರ್ಕಾರಿ ಆಸ್ತಿಗಳಿಗೆ ಇಡುತ್ತಿದ್ದಾರೆ’ ಎಂದು ಶಾಸಕ ಬಿ.ಪಿ. ಹರೀಶ್ ಟೀಕಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ದಾವಣಗೆರೆಯಲ್ಲಿ 6 ಜನರು ಹುತಾತ್ಮರಾದರು ಎನ್ನುವ ದುಃಖಕ್ಕಿಂತ ಇಷ್ಟು ದಿನ ಅವರನ್ನು ಸ್ಮರಿಸಲಿಲ್ಲ ಎನ್ನುವ ದುಃಖವೇ ಹೆಚ್ಚು. ಅವರನ್ನು ನಾವು ಸದಾ ಅಮರರನ್ನಾಗಿ ನೋಡಬೇಕು ಎಂದು ಮಾಜಿ ಸೈನಿಕ ಬೀರೇಶ ನಾಯ್ಕ ಹೇಳಿದರು.

‘ಧೂಡಾ’ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್, ಮುಖಂಡರಾದ ಮುರುಗೇಶ್ ಆರಾಧ್ಯ, ಮನೋಹರ್, ಚಂದ್ರಪ್ಪ, ಯಶವಂತರಾವ್ ಜಾಧವ್, ಹನಗವಾಡಿ ವೀರೇಶ್, ಹಾಲೇಶಪ್ಪ, ಬಿ.ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಶಿವನಗೌಡ ಪಾಟೀಲ್, ಎಚ್.ಎಸ್. ನಿಂಗರಾಜ್, ದೇವರಮನಿ ಶಿವಕುಮಾರ್, ಜಿ.ಎಸ್.ಶ್ಯಾಮ್, ಅನಿಲ್ ಮಾಯಕೊಂಡ, ಜೆ.ಪ್ರಕಾಶ್, ಭಾಗ್ಯ ಪಿಸಾಳೆ, ಗೌರಮ್ಮ ಪಾಟೀಲ, ಪುಷ್ಪವಾಲಿ, ಎಚ್.ಎಸ್.ಶಿವಕುಮಾರ್, ಬೇತೂರು ಬಸಪ್ಪ ಇನ್ನಿತರರು ಭಾಗವಹಿಸಿದ್ದರು.

ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಬೀರಪ್ಪ ಕೆ.ಎಸ್., ಶ್ರೀನಿವಾಸ್ ಪಿ.ಬಿ., ನಾಗೇಶ್, ಬೀರೇಶನಾಯ್ಕ ಹಾಗೂ ಕೃಷ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ರಾಷ್ಟ್ರ ಬಾವುಟ ಹಿಡಿದು ಪಿ.ಬಿ. ರಸ್ತೆಯಲ್ಲಿ ತಿರಂಗಾ ಯಾತ್ರೆ ನಡೆಸಿದರು. ಮಹಿಳಾ ಮುಖಂಡರು, ಕಾರ್ಯಕರ್ತೆಯವರು ಸೈನಿಕರು, ಗಣ್ಯರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು.

ಸುಪ್ರೀಂ ಕೋರ್ಟ್ಗೂ ಗೌರವ ಕೊಡದ ಆಡಳಿತ ದಾವಣಗೆರೆಯಲ್ಲಿದೆ. ಸತ್ತ ಮೇಲೆ ಜನ ನಮ್ಮನ್ನು ನೆನಪು ಮಾಡಿಕೊಳ್ಳಲ್ಲ ಎಂದು ಬದುಕಿದ್ದಾಗಲೇ ಸರ್ಕಾರಿ ಜಾಗಗಳಿಗೆ ತಮ್ಮ ಹೆಸರನ್ನು ಇಡುತ್ತಿದ್ದಾರೆ.
– ಬಿ.ಪಿ.ಹರೀಶ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.