ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ನೆಲಕ್ಕುರುಳಿದ ಮರಗಳು

Last Updated 7 ಅಕ್ಟೋಬರ್ 2021, 4:56 IST
ಅಕ್ಷರ ಗಾತ್ರ

ಬಸವಾಪಟ್ಟಣ‌: ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸಮೀಪದ ಚಿರಡೋಣಿ ದೊಡ್ಡಗಟ್ಟದ ರಸ್ತೆಯ ಒಡ್ಡಿನ ಮೇಲೆ ಎರಡು ದಿನಗಳಿಂದ ಸೂಳೆಕೆರೆ ಹಳ್ಳದ ನೀರು ಉಕ್ಕಿ ಹರಿಯುತ್ತಿದೆ.

ಈ ಹಳ್ಳದ ಸಮಸ್ಯೆ ಒಂದು ಶತಮಾನಕ್ಕಿಂತ ಹಿಂದಿನದಾಗಿದ್ದು, ಪ್ರತಿ ಮಳೆಗಾಲದಲ್ಲಿ ಸೂಳೆಕೆರೆ ಹಳ್ಳ ಉಕ್ಕಿ ಹರಿದಾಗ ಅದರ ಮೇಲಿನ ರಸ್ತೆಯನ್ನು ದಾಟಲು ಜನರು ಪರದಾಡುವಂತಾಗುವುದು ಸಾಮಾನ್ಯ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಈ ಭಾಗದ ಗ್ರಾಮಸ್ಥರ ಒತ್ತಾಯ.

ಮಂಗಳವಾರ ಸಂಜೆಯಿಂದ ಸುರಿದ ಮಳೆಗೆ ಸಮೀಪದ ಕಂಚುಗಾರನಹಳ್ಳಿಯ ರಸ್ತೆಯಲ್ಲಿ ಮರವೊಂದು ವಿದ್ಯುತ್‌ ತಂತಿಗಳ ಮೇಲೆ ಬಿದ್ದು, ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇದೇ ಗ್ರಾಮದ ರೈತರಿಗೆ ಸೇರಿದ ಅಡಿಕೆ ಮನೆಯ ಕಬ್ಬಿಣದ ಶೀಟುಗಳು ಹಾರಿ ಹೋಗಿ ವಿದ್ಯುತ್‌ ತಂತಿಗಳ ಮೇಲೆ ಬಿದ್ದಿವೆ. ದಾಗಿನಕಟ್ಟೆಯ ಜಮೀನುಗಳಲ್ಲಿ ವಿದ್ಯುತ್‌ ಕಂಬಗಳು ಬಿದ್ದಿವೆ. ಎಂಟು ವಿದ್ಯುತ್‌ ಕಂಬಗಳು ಮುರಿದು ಬಿದ್ದಿದೆ. ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಅಧಿಕಾರಿ ನಾಗರಾಜನಾಯ್ಕ ತಿಳಿಸಿದರು.

ಬಸವಾಪಟ್ಟಣ ಹೋಬಳಿಯ ದಾಗಿನಕಟ್ಟೆ ಯಲೋದಹಳ್ಳಿ, ನಿಲೋಗಲ್‌, ಕಂಚುಗಾರನಹಳ್ಳಿ, ಗುಡ್ಡದ ಬೆನಕನಹಳ್ಳಿ, ಗುಡ್ಡದ ಕೊಮಾರನಹಳ್ಳಿಯಲ್ಲಿ ಮಳೆಗೆ 100 ಎಕರೆ ಬೆಳೆಗಳಿಗೆ ಹಾನಿಯಾಗಿದೆ. ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್‌.ಆರ್‌. ರವಿಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT