ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ತುಂಬಿ ಹರಿದ ಹಿರೇಹಳ್ಳ, ಸೂಳೆಕೆರೆಯ ಪ್ರಮುಖ ನೀರಿನ ಸೆಲೆ

Last Updated 6 ಜೂನ್ 2021, 5:29 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಮಳೆಗೆ ತಾಲ್ಲೂಕಿನ ಕಾಕನೂರು ಗ್ರಾಮದ ಬಳಿ ಇರುವ ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಹಿರೇಹಳ್ಳ (ಹರಿದ್ರಾವತಿ ನದಿ) ಮೈ ದುಂಬಿ ಹರಿಯುತ್ತಿದೆ.

ಈ ಹಳ್ಳ ನೆರೆಯ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ಕಡೆಯಿಂದ ಹರಿದು ಬರುತ್ತದೆ. ಈ ಭಾಗದಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಹಿರೇಹಳ್ಳ ತುಂಬಿದೆ. ವರ್ಷದಲ್ಲಿ ಈ ಹಿರೇಹಳ್ಳ ತುಂಬಿ ಹರಿದರೆ ತಾಲ್ಲೂಕಿನ ಹೊನ್ನೇಮರದಹಳ್ಳಿ, ಲಕ್ಷ್ಮೀಸಾಗರ, ಕೊರಟಿಕೆರೆ, ಹಿರೇಗಂಗುರು, ಚಿಕ್ಕಗಂಗೂರು, ಬೊಮ್ಮೇನಹಳ್ಳಿ, ನುಗ್ಗಿಹಳ್ಳಿ, ಬುಳುಸಾಗರ ಮುಂತಾದ ಗ್ರಾಮಗಳ ಕೊಳವೆಬಾವಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಈ ಕಾರಣದಿಂದ ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.

ಚನ್ನಗಿರಿ– 5.5 ಮಿ.ಮೀ., ದೇವರಹಳ್ಳಿ– 8.2 ಮಿ.ಮೀ., ಬಸವಾಪಟ್ಟಣ– 5.4 ಮಿ.ಮೀ., ಉಬ್ರಾಣಿ– 12.4 ಮಿ.ಮೀ. ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 8.8 ಮಿ.ಮೀ. ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪ್ರಭಾರ ತಹಶೀಲ್ದಾರ್ ಅರುಣ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT