ಶುಕ್ರವಾರ, ಜೂನ್ 18, 2021
27 °C

ರಾಜೀವ್‌ ಗಾಂಧಿ, ದೇವರಾಜ್ ಅರಸು ಕೊಡುಗೆ ಅಪಾರ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶ್ರೀಸಾಮಾನ್ಯನ ಕೈಯಲ್ಲಿ ಮೊಬೈಲ್ ಬರಲು ದಿ.ರಾಜೀವಗಾಂಧಿ ಹಾಗೂ ದುರ್ಬಲರಿಗೆ ಸಾಮಾಜಿಕ ನ್ಯಾಯ ಪಡೆಯಲು ದೇವರಾಜ್ ಅರಸು ಕಾರಣ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅಭಿಪ್ರಾಯಪಟ್ಟರು.

ಎಂಸಿಸಿ ಎ ಬ್ಲಾಕ್‌ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟಾಕ್ ವಿಭಾಗದಿಂದ ಏರ್ಪಡಿಸಿದ್ದ ರಾಜೀವಗಾಂಧಿ ಮತ್ತು ದೇವರಾಜ್ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಟನಮನ ಸಲ್ಲಿಸಿ ಮಾತನಾಡಿದರು.

ರಾಜೀವಗಾಂಧಿ ಅವರು ಅತಿ ಕಿರಿಯ ವಯಸ್ಸಿನಲ್ಲಿ ಭಾರತದ ಪ್ರಧಾನಮಂತ್ರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ ಭಾರತ ದೇಶವನ್ನು ಶಕ್ತಿಶಾಲಿಯಾಗಿಸಿದರು ಎಂದು ಹೇಳಿದರು.

ಕರ್ನಾಟಕ ರತ್ನ ದೇವರಾಜ ಅರಸು ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿ. ಅವರು ರಾಜ್ಯದಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಉಳುವವನೇ ಹೊಲದ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿದ್ದಲ್ಲದೇ ತನ್ನದೇ ಜಮೀನನ್ನು ದುಡಿಯುತ್ತಿರುವವರಿಗೆ ನೀಡಿ ಮಾದರಿಯಾಗಿದ್ದರು. ಜೀತ ಪದ್ದತಿ, ಮಲಹೊರುವ ಪದ್ದತಿಗಳನ್ನು ರದ್ದು ಮಾಡಿದರು. ಬಡವರು, ದಲಿತರು, ಹಿಂದುಳಿದ ವರ್ಗದವರು , ಅಲ್ಪಸಂಖ್ಯಾತರಿಗೆ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ನೀಡಿ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಿದರು ಎಂದು ನೆನಪಿಸಿಕೊಂಡರು.

ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರಿಗೆ ಕರೆತಂದು ಗೆಲ್ಲಿಸಿ ರಾಜಕೀಯ ಪುನರಜನ್ಮ ನೀಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಇಂಟಾಕ್ ವಿಭಾಗದ ಅಧ್ಯಕ್ಷ ಕೆ ಎಂ. ಮಂಜುನಾಥ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಉದಯಕುಮಾರ್. ಎಂ.ಕೆ. ಲಿಯಾಕತ್ ಅಲಿ, ಆಲ್ಲಾವಲಿ ಸಮೀರಖಾನ್, ಆಲ್ಲಾವಲಿ ಸಜದ್‌ಖಾನ್, ಎಚ್. ಹರೀಶ್, ಡಿ.ಶಿವಕುಮಾರ್, ಎಚ್.ಎಸ್. ಶಶಿಕುಮಾರ್, ಕೇಶವನಾಯಕ್, ಬಾಷಾ, ಎಲ್ ಭೀಮೇಶ್, ಮಂಜುನಾಥ, ಕೆ.ಜೆ.ರಹಮತ್‌ಉಲ್ಲಾ, ಆಶ್ರಫ್ ಆಲಿ, ಮುಜಾಹಿದ್ ಖಾನ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು