ಸೋಮವಾರ, ಆಗಸ್ಟ್ 8, 2022
21 °C
ಕಡಿಮೆಯಾದ ತಾಲ್ಲೂಕು ಪಂಚಾಯಿತಿ 14 ಸ್ಥಾನಗಳು * ಜಿ.ಪಂ. 34, ತಾ.ಪಂ.90 ಕ್ಷೇತ್ರಗಳು

ಪುನರ್‌ ವಿಂಗಡನೆ: ಜಿ.ಪಂ. 5 ಕ್ಷೇತ್ರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡನೆ ಮಾಡಿ ಸರ್ಕಾರವು ಕರ್ನಾಟಕ ರಾಜ್ಯಪತ್ರದಲ್ಲಿ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಜಿಲ್ಲೆಯಲ್ಲಿ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹೆಚ್ಚಾಗಿವೆ. 14 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಕಡಿಮೆಯಾಗಿವೆ.

36 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಜಿಲ್ಲೆ ಹೊಂದಿತ್ತು. ಹರಪನಹಳ್ಳಿ ತಾಲ್ಲೂಕು ಬಳ್ಳಾರಿಗೆ (ಈಗಿನ ವಿಜಯಪುರಕ್ಕೆ) ಸೇರ್ಪಡೆಗೊಂಡಿದ್ದರಿಂದ ಏಳು ಸ್ಥಾನಗಳು ಕಡಿಮೆಯಾಗಿ 29ಕ್ಕೆ ಇಳಿದಿತ್ತು. ನ್ಯಾಮತಿ ತಾಲ್ಲೂಕು ಹೊರತುಪಡಿಸಿ ಉಳಿದ ಐದು ತಾಲ್ಲೂಕುಗಳಲ್ಲಿ ತಲಾ ಒಂದು ಕ್ಷೇತ್ರ ಹೆಚ್ಚಾಗಿದೆ. ಇದೇ ಸಮಯದಲ್ಲಿ ತಾಲ್ಲೂಕು ಪಂಚಾಯಿತಿಗಳಲ್ಲಿ 14 ಸ್ಥಾನಗಳು ಕಡಿಮೆಯಾಗಿವೆ. ದಾವಣಗೆರೆ ತಾಲ್ಲೂಕಿನಲ್ಲಿ 4, ಹರಿಹರದಲ್ಲಿ 2, ಜಗಳೂರಿನಲ್ಲಿ 2, ಚನ್ನಗಿರಿಯಲ್ಲಿ 6 ಕ್ಷೇತ್ರಗಳು ಕಡಿಮೆಯಾಗಿವೆ. ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ ಮಾತ್ರ ಹಿಂದೆ ಇದ್ದಷ್ಟೇ ಕ್ಷೇತ್ರಗಳು ಉಳಿದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು