ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ತಗ್ಗಿದ ಮಳೆ; ಬಿತ್ತನೆ ಕಾರ್ಯ ಚುರುಕು

Last Updated 26 ಜುಲೈ 2021, 3:10 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಜಿಲ್ಲೆಯಲ್ಲಿ 2.41 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದ್ದು, ಶನಿವಾರದ ವೇಳೆಗೆ 1,44,115 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. 1.26 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳದ ಬಿತ್ತನೆ ಗುರಿ ಇದ್ದು, ಅದರಲ್ಲಿ ಈಗಾಗಲೇ 1.20 ಲಕ್ಷ ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ 45,537 ಹೆಕ್ಟೇರ್‌ಗಳಲ್ಲಿ ಭತ್ತದ ಬಿತ್ತನೆ ಗುರಿ ಇದ್ದು, ಶನಿವಾರದವರೆಗೆ 1,675 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಕಾಲುವೆಗಳಲ್ಲಿ 275 ಹೆಕ್ಟೇರ್, ಕೆರೆಗಳಲ್ಲಿ 300 ಹೆಕ್ಟೇರ್ ಹಾಗೂ ಇತರೆ ಮೂಲಗಳಲ್ಲಿ 1100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆದಿದೆ.

811 ಹೆಕ್ಟೇರ್‌ನಲ್ಲಿರಾಗಿ ಹಾಗೂ 637 ಹೆಕ್ಟೇರ್‌ನಲ್ಲಿ ರೈತರು ಜೋಳ ಬಿತ್ತನೆ ಮಾಡಿದ್ದಾರೆ.13,648 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, 2040 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಶನಿವಾರ 2.62 ಮಿ.ಮೀ ಸರಾಸರಿ ಮಳೆಯಾಗಿದ್ದು, ₹ 27.85ಲಕ್ಷದಷ್ಟು ಮನೆ ಹಾಗೂ ಬೆಳೆ ಹಾನಿಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 2.33 ಮಿ.ಮೀ, ಹರಿಹರದಲ್ಲಿ 0.85 ಮಿ.ಮೀ, ಹೊನ್ನಾಳಿಯಲ್ಲಿ 2.4 ಮಿ.ಮೀ, ಚನ್ನಗಿರಿಯಲ್ಲಿ 7.54ರಷ್ಟು ಸರಾಸರಿ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 8, ಹೊನ್ನಾಳಿಯಲ್ಲಿ 5, ನ್ಯಾಮತಿಯಲ್ಲಿ 33, ಚನ್ನಗಿರಿಯಲ್ಲಿ 9 ಮನೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT