ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗಾಗಿ ಲಾಕ್‌ಡೌನ್‌ ಸಡಿಲಿಸಲು ರೇಣುಕಾಚಾರ್ಯ ಆಗ್ರಹ

Last Updated 30 ಏಪ್ರಿಲ್ 2021, 3:09 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ರೈತರ ಹಿತದೃಷ್ಟಿಯಿಂದ ಲಾಕ್‌ಡೌನ್‌ ಸಡಿಲಿಸಿ ಮಧ್ಯಾಹ್ನ 3ರವರೆಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ಬೆಳಿಗ್ಗೆ ತರಕಾರಿ ಕೊಯ್ದು ತಂದು ಮಾರಾಟ ಮಾಡಲು, ಮಂಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಿಗೆ ಸರಬರಾಜು ಮಾಡಲು ಈ ಅವಧಿ ಸಾಕಾಗುವುದಿಲ್ಲ. ತರಕಾರಿ, ಶೇಂಗಾ, ಮೆಕ್ಕೆಜೋಳಗಳನ್ನು ದಾವಣಗೆರೆ ಎಪಿಎಂಸಿಗೆ ಸಾಗಾಟ ಮಾಡಬೇಕಾಗುತ್ತದೆ. ಅಲ್ಲಿ ತಲುಪುವಷ್ಟರಲ್ಲಿ 10 ಗಂಟೆ ದಾಟಿರುತ್ತದೆ. ಅವಸರದಲ್ಲಿ ಕಡಿಮೆ ಬೆಲೆಗೆ ನೀಡಿ ಬರಬೇಕಾಗುತ್ತದೆ. ಅದಕ್ಕಾಗಿ ಮಧ್ಯಾಹ್ನ 3ರವರೆಗೆ ಓಡಾಟದ ಸಮಯವನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT