ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಂದು ಜಿಮ್‌ ಆರಂಭಕ್ಕೆ ಅನುಮತಿ ನೀಡಲು ಮನವಿ

Last Updated 6 ಜೂನ್ 2020, 11:50 IST
ಅಕ್ಷರ ಗಾತ್ರ

ದಾವಣಗೆರೆ: ಜೂನ್ 8ರಿಂದ ಜಿಮ್ ಆರಂಭಿಸಲು ಅನುಮತಿ ನೀಡಬೇಕು ಎಂದು ಸಾಯಿ ಜಿಮ್ ಮಾಲೀಕ ಸಾಯಿನಾಥ್ ಒತ್ತಾಯಿಸಿದರು.

‘ನಗರದಲ್ಲಿ 70ರಿಂದ 80ಕ್ಕೂ ಹೆಚ್ಚು ಜಿಮ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಜಿಮ್ ನಂಬಿಕೊಂಡು 10ರಿಂದ 15 ಜನ ತರಬೇತುದಾರರು ಜೀವನ ನಡೆಸುತ್ತಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ನೀಡುವ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸಲು ಸಿದ್ಧರಿದ್ದೇವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಮ್ ಮಾಲೀಕ ದಿಗ್ವಿಜಯ್ ಮಾತನಾಡಿ, ‘ಮೂರು ತಿಂಗಳಿನಿಂದ ಜಿಮ್‌ಗಳು ಮುಚ್ಚಿದ್ದು, ಒಂದು ತಿಂಗಳಿನಿಂದ ಟ್ರೈನರ್‌ಗಳು ಊಟಕ್ಕೂ ಪರದಾಡುವಂತಾಗಿದೆ. ಎರಡು ತಿಂಗಳು ಅವರಿಗೆ ಸಂಬಳ ನೀಡಿದೆವು. ಆದರೆ ಎಷ್ಟು ಸಹಾಯ ಮಾಡಲು ಸಾಧ್ಯ. ಸೋಮವಾರ ಜಿಮ್‌ಗಳ ಆರಂಭಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಅವರ ಬದುಕು ಕಂಗಾಲಾಗುತ್ತದೆ’ ಎಂದು ಅಳಲು ತೋಡಿಕೊಂಡರು.

ಜಿಮ್ ಮಾಲೀಕ ಎ.ನಾಗರಾಜ್ ಮಾತನಾಡಿ, ‘ಜೂನ್ 8ರಂದು ಅನುಮತಿ ನೀಡದೇ ಹೋದಲ್ಲಿ ಕ್ರೀಡಾಪಟುಗಳ ಜೊತೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಜಿಮ್ ತರಬೇತುದಾರ ಶಿವು ಪೂಜಾರಿ, ಶಿವರಾಜ್, ಫಕ್ರುದ್ದೀನ್, ಶ್ರೀರಕ್ಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT