ಸಾಸ್ವೆಹಳ್ಳಿ: ನದಿ ಪಾತ್ರದ ಜನಜೀವನ ಅಸ್ತವ್ಯಸ್ತ

7

ಸಾಸ್ವೆಹಳ್ಳಿ: ನದಿ ಪಾತ್ರದ ಜನಜೀವನ ಅಸ್ತವ್ಯಸ್ತ

Published:
Updated:
Deccan Herald

ಸಾಸ್ವೆಹಳ್ಳಿ: ತುಂಗಾಭದ್ರಾ ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೋಬಳಿ ವ್ಯಾಪ್ತಿಯ ನದಿ ತೀರದ ಜನರ ಜೀವನ ಅಸ್ತವ್ಯಸ್ತವಾಗಿದೆ.

‘ತಗ್ಗು ಪ್ರದೇಶದ ಹೊಲಗಳಿಗೆ ನೀರು ನುಗ್ಗಿ ಹಾನಿ ಸಂಭವಿಸುತ್ತಿದೆ. ನಾಟಿ ಮಾಡಿದ ಗದ್ದೆಗಳಲ್ಲಿ ನೀರು ಭತ್ತದ ಸಸಿಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಹೋಬಳಿ ವ್ಯಾಪ್ತಿಯ ಸಾಸ್ವಹಳ್ಳಿಯಲ್ಲಿ 8 ಕುಟುಂಬಗಳನ್ನು ನದಿ ತೀರದಿಂದ ಸಂಬಂಧಿಕರ ಮನೆಗಳಿಗೆ ಸ್ಥಳಾಂತರ ಮಾಡಿದ್ದು,  ಬೆನಕನಹಳ್ಳಿಯಲ್ಲಿ ನಾಲ್ಕು ಕುಟುಂಬಗಳನ್ನು ಸ್ಥಳಾಂತರ ಮಾಡಿಸಲಾಗಿದೆ. ನೀರಿನ ಮಟ್ಟ ಏರುತ್ತಿರುವುದರಿಂದ ನದಿ ತೀರಕ್ಕೆ ಜನ, ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಸೂಚಿಸಲಾಗಿದೆ’ ಎಂದು ಪ್ರಕೃತಿ ವಿಕೋಪ ಮೇಲುಸ್ತುವಾರಿಯಾದ ನ್ಯಾಮತಿ ತಾಲ್ಲೂಕಿನ ಪ್ರಭಾರ ತಹಶೀಲ್ದಾರ್ ನಾಗರಾಜ್ ಮಾಹಿತಿ ನೀಡಿದರು.

‘ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದು, ಒಟ್ಟು 397 ಎಕರೆ ನಾಟಿ ಮಾಡಿದ ಗದ್ದೆಯಲ್ಲಿ ನೀರು ನಿಂತಿದೆ. 160 ಅಡಿಕೆ, 10 ತೆಂಗು, 90 ಎಕರೆ ಮೆಕ್ಕೆಜೋಳ, 2 ಎಕರೆ ಹತ್ತಿ, 1 ಎಕರೆ ರಾಗಿಯಲ್ಲಿ ನೀರು ನಿಂತಿದೆ. ಬೆಳೆಹಾನಿಯ ಲೆಕ್ಕಚಾರವನ್ನು ಕೃಷಿ ಅಧಿಕಾರಿಗಳ ಜತೆ ಅಂದಾಜಿಸಲಾಗುವುದು’ ಎಂದರು.

ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ರುಕ್ಮಿಣಿ ಬಾಯಿ, ಆರ್‌ಐ ಜಯಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜಪ್ಪ, ಧರ್ಮಪ್ಪ, ಅಶೋಕ್ ನಾಯ್ಕ್, ಪ್ರಸನ್ನ ಕುಮಾರ್, ಸಂತೋಷ್ ಕುಮಾರ್ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !