ಸಾಸ್ವೆಹಳ್ಳಿ: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂಚಾರಕ್ಕೆ ತೊಂದರೆಯಾಗುವಂತೆ ಅನಧಿಕೃತವಾಗಿ ನೆಲೆಸಿದ್ದ ಬೀದಿಬದಿ ತಳ್ಳುಗಾಡಿ ಅಂಗಡಿಗಳು ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು.

ಇಲ್ಲಿನ ವೃತ್ತದಲ್ಲಿ ಗೋಬಿ, ಪಾನಿಪುರಿ, ತರಕಾರಿ, ಎಲೆ ವ್ಯಾಪಾರಿಗಳು ಸೇರಿ ವಿವಿಧ ತಳ್ಳುಗಾಡಿ ಅಂಗಡಿಗಳು ಮತ್ತು ಬೇಕಾಬಿಟ್ಟಿಯಾಗಿ ಬೈಕ್, ಇನ್ನಿತರೆ ವಾಹನ ನಿಲುಗಡೆಯಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದಿತ್ತು.

ಹೊನ್ನಾಳಿ ಪಿಐ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ತೀರ್ಥಲಿಂಗಪ್ಪ ಮತ್ತು ಸಿಬ್ಬಂದಿ ಸೋಮವಾರ ಕಾರ್ಯಾಚರಣೆ ಕೈಗೊಂಡರು.

‘ಅನಾದಿ ಕಾಲದಿಂದ ಅಂಗಡಿ ಹಾಕಿದ್ದೇವೆ’ ಎಂದು ವ್ಯಾಪಾರಿಗಳು ತಕರಾರು ತೆಗೆದರೂ, ಪೊಲೀಸರು ತೆರವುಗೊಳಿಸಿ, ‘ನೋ–ಪಾರ್ಕಿಂಗ್ ಪ್ರದೇಶದಲ್ಲಿ ಮತ್ತೆ ಅಂಗಡಿ ಅಥವಾ ವಾಹನಗಳನ್ನು ನಿಲ್ಲಿಸಿದರೆ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.