ಶುಕ್ರವಾರ, ಆಗಸ್ಟ್ 19, 2022
27 °C

ಎರಡನೇ ಹಂತದ ಚುನಾವಣೆ: 77 ನಾಮಪತ್ರ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎರಡನೇ ಹಂತದ ಚುನಾವಣೆ ನಡೆಯುವ ಚನ್ನಗಿರಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ 101 ಗ್ರಾಮ ಪಂಚಾಯಿತಿಗಳ 1,282 ಸ್ಥಾನಗಳಿಗೆ ಸಲ್ಲಿಸಿರುವ ನಾಮಪತ್ರಗಳಲ್ಲಿ 77 ತಿರಸ್ಕೃತವಾಗಿವೆ.

ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದಿದ್ದು, ಸ್ವೀಕೃತವಾದ 4,345ರಲ್ಲಿ 4,110 ಕ್ರಮಬದ್ಧವಾಗಿವೆ.  6 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಚನ್ನಗಿರಿ ತಾಲ್ಲೂಕಿನ 735 ಸ್ಥಾನಗಳಿಗೆ 2452 ನಾಮಪತ್ರ ಸಲ್ಲಿಕೆಯಾಗಿದ್ದು, 30 ತಿರಸ್ಕೃತಗೊಂಡಿವೆ. 2294 ನಾಮಪತ್ರಗಳು ಕ್ರಮಬದ್ಧವಾಗಿವೆ. ನ್ಯಾಮತಿ ತಾಲ್ಲೂಕಿನ 196 ಸ್ಥಾನಗಳಿಗೆ ಒಟ್ಟು 694 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 652 ಕ್ರಮಬದ್ಧವಾಗಿವೆ. 42 ತಿರಸ್ಕೃತಗೊಂಡಿವೆ. ಹರಿಹರ ತಾಲ್ಲೂಕಿನ 351 ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಕೆಯಾದ 1,199ರಲ್ಲಿ 5 ನಾಮಪತ್ರಗಳಷ್ಟೇ ತಿರಸ್ಕೃತಗೊಂಡಿದ್ದು, 1164 ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಹರಿಹರ, ಚನ್ನಗಿರಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಡಿ.27ರಂದು ಮತದಾನ ನಡೆಯಲಿದೆ. ಡಿ. 30ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.