ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ | 21ಕೆ.ಜಿ. ಶ್ರೀಗಂಧ ವಶ: ಮೂವರ ಬಂಧನ

Published 27 ಜುಲೈ 2023, 7:21 IST
Last Updated 27 ಜುಲೈ 2023, 7:21 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಕುಳಗಟ್ಟೆ ಕ್ರಾಸ್ ಬಳಿ ಅಕ್ರಮವಾಗಿ ಗಂಧದ ಮರ ಸಾಗಾಟ ಮಾಡುತ್ತಿದ್ದಾಗ ಮೂವರನ್ನು ಬಂಧಿಸಿರುವ ಪೊಲೀಸರು ₹ 42,000 ಮೌಲ್ಯದ 21 ಕೆ.ಜಿ. ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಚೀಲಾಪುರ ಗ್ರಾಮದ ಸೈಯದ್ ಅಲ್ಲಾಭಕ್ಷಿ, ಮಹಮದ್ ರಫೀಕ್, ನೂರುಲ್ಲಾ ಬಂಧಿತರು.

ಹೊನ್ನಾಳಿ ಠಾಣೆಯ ಪಿಎಸ್ಐ ಸಿದ್ದಪ್ಪ ಅವರು ಗಸ್ತಿನಲ್ಲಿದ್ದಾಗ ಆರೋಪಿಗಳು ಗಂಧದ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಶುರಾಮಪ್ಪ ಎಎಸ್ಐ, ದೊಡ್ಡಬಸಪ್ಪ, ಧರ್ಮಪ್ಪ, ಸಿದ್ದನಗೌಡ, ರಾಘವೇಂದ್ರ, ಮಂಜುನಾಥ, ಸುರೇಶನಾಯ್ಕ ದಾಳಿಯ ವೇಳೆ ಇದ್ದರು.

ಗಂಧದ ಮರ ಕಳವು

ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರಗಳನ್ನು ಕಳವು ಮಾಡಿದ ಪ್ರಕರಣ ಮಂಗಳವಾರ ನಡೆದಿದೆ.

ಗ್ರಾಮದ ಕೆ.ಎಚ್. ಸಂತೋಷಕುಮಾರ ಅವರು ಕಂಚಿಗನಹಳ್ಳಿ ಗಡಿಯಲ್ಲಿರುವ ಜಮೀನಿನಲ್ಲಿ 2,150 ಗಂಧದ ಮರಗಳನ್ನು ಬೆಳೆದಿದ್ದು ಅದರಲ್ಲಿ 8 ವರ್ಷದ 10 ಗಂಧದ ಮರಗಳನ್ನು ಮಿಷನ್‌ನಲ್ಲಿ ಕತ್ತರಿಸಿ ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪಿಎಸ್‌ಐ ಪಿ.ಎಸ್.ರಮೇಶ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT