ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾರೋ ದೂರು ಕೊಟ್ಟ ಮಾತ್ರಕ್ಕೆ ಬಂಧನ ಅಂದರೆ ಹೇಗೆ: BSY ಪರ ಶಾಮನೂರು ಬ್ಯಾಟಿಂಗ್

Published 14 ಜೂನ್ 2024, 13:33 IST
Last Updated 14 ಜೂನ್ 2024, 13:33 IST
ಅಕ್ಷರ ಗಾತ್ರ

ದಾವಣಗೆರೆ: ‘ಆರೋಪ ಸಾಬೀತಾದ ಮೇಲೆ ಬಂಧನ ಅಂದರೆ ಸರಿ. ಯಾರೋ ಹೆಣ್ಣು ಮಗಳು ದೂರು ಕೊಟ್ಟ ಮಾತ್ರಕ್ಕೆ ಬಂಧನ ಅಂದರೆ ಹೇಗೆ? ಅದಕ್ಕೆ ಅರ್ಥ ಇದೆಯೇ’ ಎಂದು ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದರು.

ಯಡಿಯೂರಪ್ಪ ವಿರುದ್ಧದ ಪ್ರಕರಣ ಸಂಬಂಧ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೋ ದಾರಿಯಲ್ಲಿ ಹೋಗೋರು ಕಂಪ್ಲೆಂಟ್ ಕೊಟ್ರೆ ಅರೆಸ್ಟ್ ಎಂದರೆ ಏನ್ ಅರ್ಥ. ಆಕೆ 55 ಜನರ ವಿರುದ್ಧವೂ ದೂರು ನೀಡಿದ್ದಾ‌ಳೆ. ಇಂತಹದಕ್ಕೆ ಬೆಲೆ ಇದೇಯೇ‘ ಎಂದು ಪ್ರಶ್ನಿಸಿದರು.

‘ನಟ ದರ್ಶನ್ ಮಾಡಿದ್ದು ತಪ್ಪು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಬುದ್ಧಿ ಹೇಳಿ ಕಳಿಸಬೇಕಿತ್ತು. ಅದನ್ನು ಬಿಟ್ಟು ಸಾಯುವ ಹಾಗೆ ಹೊಡೆಯಬಾರದಿತ್ತು’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

‘ದರ್ಶನ್ ಮೇಲೆ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT