ಹರಿಹರ: ಗುಂಡಿಮಯವಾಗಿರುವ ನಗರದ ಹೊರವಲಯದ ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು 1.3 ಕಿ.ಮೀ. ವ್ಯಾಪ್ತಿವರೆಗೆ ದ್ವಿಪಥದ ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ (ಸಿಸಿ ರಸ್ತೆ) ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.

ಪಿಡಬ್ಲ್ಯುಡಿ ಇಲಾಖೆಯ ಅಂಗಸಂಸ್ಥೆಯಾದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ (ಎಸ್ಎಚ್ಡಿಪಿ) ಕಾಮಗಾರಿ ನಡೆಯಲಿದ್ದು, ₹ 10 ಕೋಟಿ ಮೊತ್ತಕ್ಕೆ ಟೆಂಡರ್ ಪ್ರಕ್ರಿಯೆ ಆಗಿದೆ. ಹೊರವಲಯದ ಎಲ್ಐಸಿ ಕಚೇರಿಯಿಂದ ಬೈಪಾಸ್ ಕಡೆಯ ಇಂಡಿಯನ್ ಫೌಂಡ್ರಿ ವರೆಗಿನ ಡಾಂಬರ್ ರಸ್ತೆಯ ಜಾಗದಲ್ಲಿ ಸುಸಜ್ಜಿತ ದ್ವಿಪಥದ ಸಿಸಿ ರಸ್ತೆ ನಿರ್ಮಾಣವಾಗಲಿದೆ.

ಕಾಮಗಾರಿಯ ಉದ್ದ 1.3 ಕಿ.ಮೀ. ಇರಲಿದೆ, ದ್ವಿಪಥದ ತಲಾ ಒಂದು ಬದಿಯಲ್ಲಿ 7.5 ಮೀ. ಅಗಲದ ರಸ್ತೆ, ಮಧ್ಯದಲ್ಲಿ 1.2 ಮೀ. ವಿಭಜಕ (ಮೀಡಿಯನ್), ಎರಡೂ ಬದಿ ತಲಾ 1.65 ಮೀ. ಅಗಲದ ಭುಜ (ಶೋಲ್ಡರ್) ನಿರ್ಮಿಸಲಾಗುವುದು.

‘ರಸ್ತೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಆದಷ್ಟು ಬೇಗ ಆರಂಭಿಸಿ, ಟೆಂಡರ್ನಲ್ಲಿ ನಿಗದಿ ಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ನಗರಕ್ಕೆ ಅಂಟಿಕೊಂಡಿರುವ ರಸ್ತೆಯಾಗಿರುವುದರಿಂದ ವಿಭಜಕದಲ್ಲಿ ಬೀದಿ ದೀಪಗಳ ವ್ಯವಸ್ಥೆಯೂ ಆಗಬೇಕು’ ಎಂದು ಸಾರ್ವಜನಿಕರ ಆಗ್ರಹ.

ನಗರದ ಗಾಂಧಿ ವೃತ್ತದಿಂದ ಬೈಪಾಸ್ನ ಸಿದ್ಧವೀರಪ್ಪ ವೃತ್ತದವರೆಗಿನ 4 ಕಿ.ಮೀ. ರಸ್ತೆ ಗುಂಡಿಮಯವಾಗಿದ್ದು ಈ ಇಡೀ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿತ್ತು
ನಾಗರಾಜ್ ಭಂಡಾರಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ

ಮಳೆ ಇದ್ದುದ್ದರಿಂದ ಕಾಮಗಾರಿ ಆರಂಭಿಸಿಲ್ಲ. ಆದಷ್ಟು ಬೇಗ ಕಾಮಗಾರಿ ಆರಂಭಿಸುತ್ತೇವೆ
ಮರಿಸ್ವಾಮಿ ಎಚ್.ವಿ ಪಿಡಬ್ಲ್ಯುಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.