ಭಾನುವಾರ, ಜನವರಿ 24, 2021
19 °C

ಶಾರ್ಟ್‌ ಸರ್ಕೀಟ್‌: ಹೋಟೆಲ್‌ಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಶಾಮನೂರು ರಸ್ತೆಯ ಆಫೀಸರ್ಸ್ ಕ್ಲಬ್‌ ಎದುರಿನ ‌ಗೋಲ್ಡನ್ ಸ್ಪೂನ್ ಹೋಟೆಲ್‌ನಲ್ಲಿ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ತಗುಲಿ ಹೋಟೆಲ್ ಸುಟ್ಟಿದೆ.

ಬೆಂಕಿ ತಗುಲಿದ ಪರಿಣಾಮ ನೋಡು ನೋಡುತ್ತಿದ್ದಂತೆ ಹೋಟೆಲ್ ಹೊತ್ತಿ ಉರಿದಿದೆ. ಇದರಿಂದ ಅಪಾರ ವಸ್ತುಗಳು ಸುಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಹೋಟೆಲ್‌ಗೆ ಬೀಗ ಹಾಕಿದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬೀಗ ಮುರಿದು ಒಳಗೆ ಹೋಗಿ ಕಾರ್ಯಾಚರಣೆ ನಡೆಸಿದರು.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೋಟೆಲ್ ‌ಮಿಥುನ್ ಎಂಬುವವರಿಗೆ ಸೇರಿದೆ. 20 ದಿನಗಳ ಹಿಂದೆಯಷ್ಟೇ ನೂತನವಾಗಿ ಹೋಟೆಲ್ ಆರಂಭಿಸಲಾಗಿತ್ತು.

‘ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದೆವು. ಇದರಿಂದ ಹೆಚ್ಚಿನ ಅನಾಹುತ ತಪ್ಪಿತು. ಹೋಟೆಲ್‌ ಒಳಗೆ ಸಂಪೂರ್ಣ ಸುಟ್ಟಿದೆ. ಹೋಟೆಲ್‌ಗೆ ರಜೆ ಇತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಆಗಿಲ್ಲ. ರಜೆ ಇದ್ದ ಕಾರಣ ಹೋಟೆಲ್ ಮಾಲೀಕರು ಸಂಪರ್ಕಕ್ಕೆ ಸಿಗಲಿಲ್ಲ. ಎಷ್ಟು ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ’ ಎಂದು ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು