ಸೋಮವಾರ, ಆಗಸ್ಟ್ 26, 2019
27 °C

ಶಿವಶಂಕರ್‌ ಸುತಾರ್‌ರಿಂದ ಏಕವ್ಯಕ್ತಿ ಕಲಾ ಪ್ರದರ್ಶನ 18ರಿಂದ

Published:
Updated:
Prajavani

ದಾವಣಗೆರೆ: ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಭಾಗಿತ್ವದಲ್ಲಿ ಆಗಸ್ಟ್‌ 18ರಿಂದ 20ರವರೆಗೆ ಬೆಂಗಳೂರಿನ ಕಸ್ತೂರಬಾ ರಸ್ತೆಯ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ದಾವಣಗೆರೆಯ ಕಲಾವಿದ ಶಿವಶಂಕರ್‌ ಸುತಾರ್‌ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

18ರಂದು ಬೆಳಿಗ್ಗೆ 11.30ಕ್ಕೆ ಹಿರಿಯ ಕಲಾ ವಿಮರ್ಷಕ ಕೆ.ವಿ. ಸುಬ್ರಹ್ಮಣ್ಯಂ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಸದಸ್ಯ ಗಣಪತಿ ಎಸ್‌. ಹೆಗಡೆ, ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್‌ ಡಾ. ಎ.ಸಿ. ಶೈಲಜಾ ಉಪಸ್ಥಿತರಿರುವರು. ಮೂರು ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಲಾ ಪ್ರದರ್ಶನ ನಡೆಯಲಿದೆ ಎಂದು ಶಿವಶಂಕರ್‌ ಸುತಾರ್‌ (ಮೊ: 9972274639) ತಿಳಿಸಿದ್ದಾರೆ.

ಕಲಬುರ್ಗಿಯ ಬಂದರವಾಡ್‌ ಗ್ರಾಮದಲ್ಲಿ ಜನಿಸಿರುವ ಶಿವಶಂಕರ್‌ ಅವರು, ಕಲಬುರ್ಗಿಯ ಎಂ.ಎಂ.ಕೆ. ಕಾಲೇಜ್‌ ಆಫ್‌ ವಿಜುವಲ್‌ ಆರ್ಟ್‌ ಕಾಲೇಜಿನಲ್ಲಿ ಬಿಎಫ್‌ಎ ಪೇಂಟಿಂಗ್‌ ಹಾಗೂ ಎಂ.ವಿ.ಎ. ಗ್ರಾಫಿಕ್‌ ಅಧ್ಯಯನ ನಡೆಸಿದ್ದಾರೆ. ಸದ್ಯ ದಾವಣಗೆರೆಯಲ್ಲೇ ನೆಲೆಸಿರುವ ಅವರು ದೇಶದ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

Post Comments (+)