ದಾವಣಗೆರೆ: ಬೆಂಗಳೂರಿನ ಶಾಯ್ನಾ ಮಣಿಮುತ್ತು, ಶನಿವಾರ ಮುಕ್ತಾಯವಾದ ರಾಜ್ಯ ರ್ಯಾಂಕಿಂಗ್ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ 'ಡಬಲ್' ಸಾಧನೆ ಮಾಡಿದರು.

ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಶಾಯ್ನಾ 21-19, 21-14 ರಿಂದ ಮೈಸೂರಿನ ಆಟಗಾರ್ತಿ, ಅಗ್ರ ಶ್ರೇಯಾಂಕಿತೆ ದಿಯಾ ಭೀಮಯ್ಯ ಎದುರು ಗೆದ್ದರು.

15 ವರ್ಷದೊಳಗಿನ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಶಾಯ್ನಾ ಎದುರಿನ ಪಂದ್ಯದಲ್ಲಿ ಐಕ್ಯಾ ಶೆಟ್ಟಿ 21-18, 11-5 ಮುನ್ನಡೆ ಕಂಡಿದ್ದರು. ಈ ವೇಳೆ ಎದುರಾಳಿ ಗಾಯಗೊಂಡು ಹಿಂದೆ ಸರಿದ ಕಾರಣ ಶಾಯ್ನಾ ವಿಜಯಿಯಾದರು.

17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಮೈಸೂರಿನ ಹಾರ್ದಿಕ್ ದಿವ್ಯಾಂಶ್ 21-17, 21-19 ರಿಂದ ಮೂರನೇ ಶ್ರೇಯಾಂಕದ ಇಶಾನ್ ನಾಯ್ಕ ಅವರನ್ನು ಮಣಿಸಿದರು.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಹೋರಾಟದಲ್ಲಿ ಬೆಂಗಳೂರಿನ ಸಾಯಿ ಪುಷ್ಕರ್ 21-11, 21-23, 21-18 ರಿಂದ ಮೈಸೂರಿನ ಆಟಗಾರ, ಅಗ್ರಶ್ರೇಯಾಂಕದ ಶ್ಯಾಮ್ ಬಿಂಡಿಗನವಿಲೆಗೆ ಆಘಾತ ನೀಡಿದರು.

17 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್ನಲ್ಲಿ ಅಮಿತ್ ರಾಜ್ ಮತ್ತು ಹಾರ್ದಿಕ್ ದಿವ್ಯಾಂಶ್ 17-21, 21-9, 21-14 ರಿಂದ ಕೆ.ಯದುನಂದನ್ ಮತ್ತು ಎ.ವಂಶಿ ಎದುರು ಜಯಿಸಿದರೆ, ಈ ವಿಭಾಗದ ಬಾಲಕಿಯರ ಡಬಲ್ಸ್ ಫೈನಲ್ನಲ್ಲಿ ಅದಿತಿ ದೀಪಕ್ ರಾಜ್ ಮತ್ತು ವೃದ್ಧಿ ಪೊನ್ನಮ್ಮ ಬಿ.ವಿ. 11-21, 21-16, 21-15 ರಿಂದ ಇಶಿಕಾ ಬರುವಾ ಮತ್ತು ಲಕ್ಷ್ಯ ರಾಜೇಶ್ ವಿರುದ್ಧ ಗೆಲುವು ಕಂಡರು.

15 ವರ್ಷದೊಳಗಿನ ಬಾಲಕರ ಡಬಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪಿಯೂಷ್ ತ್ರಿಪಾಠಿ ಮತ್ತು ಶ್ಯಾಮ್ ಬಿಂಡಿಗನವಿಲೆ 21-11, 21-14 ರಿಂದ ಎಸ್. ಹರ್ಷವರ್ಧನ್ ಮತ್ತು ಎನ್.ಡಿ. ನಿಕೇತನ್ ಹರಿ ಎದುರು, ಈ ವಿಭಾಗದ ಬಾಲಕಿಯರ ಡಬಲ್ಸ್ ಫೈನಲ್ನಲ್ಲಿ ನಿಧಿ ಆತ್ಮರಾಮ್ ಮತ್ತು ಸೆಲ್ವಸಮೃದ್ಧಿ 21-12 21-10 ರಿಂದ ಅವನಿ ಕುಲಕರ್ಣಿ ಮತ್ತು ತನ್ವಿ ಮುನೋತ್ ವಿರುದ್ಧ ವಿಜಯಿಯಾದರು.

17 ವರ್ಷದೊಳಗಿನ ಮಿಶ್ರ ಡಬಲ್ಸ್ನ ಫೈನಲ್ನಲ್ಲಿ ಮನೀಷ್ ಎಸ್.ಆರ್. ಮತ್ತು ಅದಿತಿ ದೀಪಕ್ ರಾಜ್ 21-9, 18-21, 21-10 ರಿಂದ ಧ್ಯಾನ್ ಸಂತೋಷ್ ಮತ್ತು ದಿಶಾ ಸಂತೋಷ್ ಎದುರು, 15 ವರ್ಷದೊಳಗಿನ ಮಿಶ್ರ ಡಬಲ್ಸ್ ಫೈನಲ್ನಲ್ಲಿ ಮೆಹುಲ್ ಮಾನವ್ ಮತ್ತು ದಿಶಾ ರವಿ ಭಟ್ 21-14, 21-14 ರಿಂದ ವಿಹಾನ್ ಸಿ. ಮತ್ತು ತನ್ವಿ ಮುನೋತ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.