ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಕಾರು ಅಪಘಾತ: ಶ್ರೀರಾಮ ಸೇನೆ ಮುಖಂಡನಿಗೆ ಗಂಭೀರ ಗಾಯ

Published 19 ಜೂನ್ 2024, 5:35 IST
Last Updated 19 ಜೂನ್ 2024, 5:35 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕ್ಲಾಕ್ ಟವರ್ ಬಳಿ ಬುಧವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಶ್ರೀರಾಮ ಸೇನೆಯ ಮುಖಂಡ ಮಣಿ ಸರ್ಕಾರ್ ತೀವ್ರ ಗಾಯಗೊಂಡಿದ್ದಾರೆ.

ಅತಿಯಾದ ವೇಗದಿಂದ ಬಂದ ಕಾರು, ನಿಯಂತ್ರಣ ಕಳೆದುಕೊಂಡು‌ ಬೈಕ್ ಹಾಗೂ ಸರ್ಕಲ್‌ನ ಕಟ್ಟೆಗೆ ಡಿಕ್ಕಿ ಹೊಡೆದಿದೆ.

ಕಾರು ಚಲಾಯಿಸುತ್ತಿದ್ದ ಮಣಿ ಸರ್ಕಾರ ಅವರನ್ನು ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಹಾಗೂ ಬೈಕ್ ಸವಾರ ಹಾಲೇಶ್ ಅವರನ್ನು ಸಿ.ಜೆ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿ ಸರ್ಕಾರ್ ಅವರ ಎರಡು ಕಾಲುಗಳಿಗೆ ಗಂಭೀರವಾದ ಪೆಟ್ಟಾಗಿದೆ.

ಸರ್ಕಲ್ ಬಳಿ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋದಾಗ, ಅತಿಯಾದ ವೇಗ ಇದ್ದಿದ್ದರಿಂದ ಅಪಘಾತ ಸಂಭವಿಸಿದೆ‌ ಎಂದು ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಎನ್‌. 'ಪ್ರಜಾವಾಣಿ'ಗೆ ತಿಳಿಸಿದರು.

ಸರ್ಕಲ್‌ನ ಕಟ್ಟೆಗೆ ಡಿಕ್ಕಿ ಹೊಡೆದ ಕಾರು ಬಳಿಕ ರಸ್ತೆ ಬದಿಯಲ್ಲಿನ ಸೆಕೆಂಡ್ಸ್ ಕಾರ್ ಶೋ ರೂಂಗೆ ನುಗ್ಗಿದ್ದು, ಅಲ್ಲಿದ್ದ ಎರಡು ಕಾರ್‌ಗಳಿಗೆ ಹಾನಿಯಾಗಿದೆ.

ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT