ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ಒತ್ತಡದ ಸ್ಪಂದನೆ, ನಿಲ್ಲದ ಜನರ ಒಡಾಟ -ನಿಯಂತ್ರಿಸಲು ಪೊಲೀಸರ ಪರದಾಟ

Last Updated 30 ಏಪ್ರಿಲ್ 2021, 3:30 IST
ಅಕ್ಷರ ಗಾತ್ರ

ದಾವಣಗೆರೆ: 14 ದಿನಗಳ ಲಾಕ್‌ಡೌನ್‌ ಜಾರಿಯಾದ ಎರಡನೇ ದಿನವೂ ಪೊಲೀಸರು ಹಲವು ಕಡೆ ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್‌ ಮಾಡಿಸಬೇಕಾಯಿತು. ಹಲವು ಜಂಕ್ಷನ್‌ಗಳಲ್ಲಿ ಜನರ ಓಡಾಟ ನಿಲ್ಲಿಸಲು ಪೊಲೀಸರು ಲಾಠಿ ಬೀಸಿದರು.

ಅಗತ್ಯ ವಸ್ತುಗಳನ್ನ ಕೊಳ್ಳುವ ಸಮಯ ಮುಗಿದಿದ್ದರೂ ಜನರ ಓಡಾಟ ಇತ್ತು. ದ್ವಿಚಕ್ರ ವಾಹನಗಳಲ್ಲಿ ಸಂಚಾರ ಹೆಚ್ಚಾಗಿತ್ತು. ಅನಗತ್ಯ ಓಡಾಡುವ ವಾಹನಗಳ ತಡೆದು ಪೊಲೀಸರ ತಪಾಸಣೆ ನಡೆಸಿದರು. ಇದರಿಂದ ಗುಂಡಿ ಸರ್ಕಲ್‌ ಸಹಿತ ಕೆಲವೆಡೆ ಟ್ರಾಫಿಕ್‌ ಜಾಮ್‌ ಆಯಿತು.

ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಕೆಲವು ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆವರಗೆರೆ ಸಹಿತ ಕೆಲವು ಕಡೆಗಳಲ್ಲಿ ಯಾರೂ ಓಡಾಡಿದರೂ ಕೇಳುವವರಿರಲಿಲ್ಲ.‌

ಗುರುವಾರ ಮಾಸ್ಕ್‌ ಹಾಕದ 333 ಮಂದಿಗೆ ಕೇಸ್‌ ಹಾಕಿದ್ದಾರೆ. ₹ 42,650 ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT