ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ದೊಡ್ಡ ಕೆರೆಯೆಂದೇ ಗುರುತಿಸಿಕೊಂಡಿರುವ ಕೊಂಡಜ್ಜಿ ಕೆರೆಯಲ್ಲಿ ನೀರಿಲ್ಲದೆ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗಿವೆ. ತೀವ್ರ ಬರಗಾಲದಿಂದಾಗಿ ಕೆರೆಯು ತುಂಬಲಿಲ್ಲ. ಕೆರೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನೂ ಸುತ್ತಮುತ್ತಲಿನ ಗ್ರಾಮಗಳ ಕೆಲವು ರೈತರು ತಮ್ಮ ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೂಲಕ ಖಾಲಿ ಮಾಡಿದರು. ಇದರಿಂದಾಗಿ ಕೆರೆಯನ್ನೇ ಆಶ್ರಯಿಸಿದ್ದ ಪಶು– ಪಕ್ಷಿಗಳು ಇದೀಗ ನೀರಿಗಾಗಿ ಪರಿತಪಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.