ಹಿರಿಯೂರು: ಗಡಿ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಶನಿವಾರ ನೆಹರು ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಭಾರತೀಯ ಪರಂಪರೆಯಲ್ಲಿ ಗುರುವಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಶಿಕ್ಷಕರಿಗೆ ಮಕ್ಕಳ ಪ್ರೀತಿಯೇ ಪ್ರಧಾನವಾಗಿರಬೇಕು. ಮಕ್ಕಳನ್ನು ಶಿಕ್ಷಿಸುವ ಬದಲು ಬೋಧನೆಯತ್ತ ಆಕರ್ಷಿಸಿ ಕಲಿಸಬೇಕು. ಕ್ರಿಯಾತ್ಮಕ ಬದಲಾವಣೆಗಳು ಶಿಕ್ಷಣದ ಮಾಲಕ ಆಗಬೇಕು. ಶಿಕ್ಷಕರು ಪಠ್ಯ ಬೋಧನೆಯ ಜೊತೆಗೆ ಮಕ್ಕಳಿಗೆ ನೈತಿಕ ಪಾಠಗಳನ್ನು ತಿಳಿಸಿಕೊಡಬೇಕು ಎಂದು ಸ್ವಾಮೀಜಿ ಸೂಚಿಸಿದರು.

ನೆಹರು ಗ್ರಾಮಾಂತರ ಪ್ರೌಢಶಾಲೆ ಹಳ್ಳಿಗಾಡಿನ ಜನರ ಶಿಕ್ಷಣಕ್ಕೆ ನೆರವಾಗಿದೆ. ಮಠವು ಸರ್ಕಾರದ ಜೊತೆ ಸೇರಿ ಶಿಕ್ಷಣ ನೀಡುವ ಕೆಲಸಕ್ಕೆ ಆದ್ಯತೆ ನೀಡಿದೆ. ನಾಡಿನಲ್ಲಿ ಸಾಕ್ಷರತೆ ಪ್ರಮಾಣದ ಹೆಚ್ಚಳಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಲಕ್ಷಾಂತರ ಜನರಿಗೆ ಅಕ್ಷರದ ಜೊತೆ ದಾಸೋಹ ವ್ಯವಸ್ಥೆ ಮಾಡಿ ಜ್ಞಾನದ ಬೀಜ ಬಿತ್ತಲಾಗಿದೆ ಎಂದರು.

‘ಸರ್ಕಾರ ಮಾಡಲಾಗದ ಶಿಕ್ಷಣ ಸೇವೆಯನ್ನು ಸಿದ್ದಗಂಗಾ ಮಠ ಮಾಡಿದೆ. ನಾಡಿಗೆ ಮತ್ತು ದೇಶಕ್ಕೆ ಹಲವಾರು ಜ್ಞಾನಿಗಳನ್ನು ಕೊಡುಗೆಯಾಗಿದೆ ನೀಡಿದೆ. ನನ್ನ ಕ್ಷೇತ್ರದಲ್ಲಿ ಮಠದ ಶಾಲೆ ಇರುವುದು ಹೆಮ್ಮೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ದೇವರಾಜು, ಟಿ. ತ್ರಿಯಂಬಕಮೂರ್ತಿ, ಚಮನ್ ಷರೀಫ್, ಜೆ.ಆರ್. ಸುಜಾತಾ, ಆಸಿಫ್ ಅಲಿ, ಮುನೀರ್, ಕಿರಣ್ ಪಟ್ರೇಹಳ್ಳಿ, ಮಹಮದ್ ಫಕ್ರುದ್ದೀನ್ ಯರಗುಂಟೇಶ್ವರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.