ಶ್ರೀಗಂಧ ವಶ
ಚನ್ನಗಿರಿ: ಗಂಧದ ಮರ ಕಡಿದ ಮೂವರ ಬಂಧನ

ಚನ್ನಗಿರಿ: ತಾಲ್ಲೂಕಿನ ಮರವಂಜಿ ಶಾಖಾ ವ್ಯಾಪ್ತಿಯ ಮಸಣಿಕೆರೆ ಅರಣ್ಯ ಪ್ರದೇಶದ ನೆಡುತೋಪಿನಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದಾಗ ಮೂವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದ ಸಂತೋಷ್, ಬಸವರಾಜ್ ಹಾಗೂ ರಾಮು ಬಂಧಿತರು.
ಭಾನುವಾರ ರಾತ್ರಿ ಶ್ರೀಗಂಧವನ್ನು ಕಡಿದು ತುಂಡು ಮಾಡುತ್ತಿದ್ದಾಗ ಚನ್ನಗಿರಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ₹20 ಸಾವಿರ ಮೌಲ್ಯದ 13 ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.