ಶುಕ್ರವಾರ, ಆಗಸ್ಟ್ 19, 2022
27 °C

ಜೇನು ನೊಣ ಕಚ್ಚಿ ಕೃಷಿ ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಲ್ಲೂಕಿನ ಗೋಪನಾಳ್‌ ಗ್ರಾಮದಲ್ಲಿ ಅಡಿಕೆ ಕೊಯ್ಲು ಮಾಡಲು ತೆರಳಿದ್ದ ಕೃಷಿ ಕೂಲಿ ಕಾರ್ಮಿಕರೊಬ್ಬರು ಮರದಲ್ಲಿದ್ದ ಜೇನು ನೊಣ ಕಚ್ಚಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ಗ್ರಾಮದ ಕಾರ್ಮಿಕ ಬಿ.ಕೆ. ಕರಿಯಪ್ಪ (36) ಮೃತಪಟ್ಟವರು. ಅವರು ಇಬ್ಬರು ಕಾರ್ಮಿಕರೊಂದಿಗೆ ಗ್ರಾಮದ ಪೂಜಾರ್ ವೀರಭದ್ರಪ್ಪ ಎಂಬುವವರ ತೋಟಕ್ಕೆ ಅಡಿಕೆ ಕೊಯ್ಲು ಮಾಡುವ ಕೆಲಸಕ್ಕೆ ಹೋಗಿದ್ದರು. ಉಳಿದ ಇಬ್ಬರು ಓಡಿ ಅಪಾಯದಿಂದ ಪಾರಾಗಿದ್ದರು.

‘ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರದಲ್ಲಿದ್ದ ಜೇನು ನೊಣಗಳು ಕರಿಯಪ್ಪ ಅವರಿಗೆ ಕಚ್ಚಿವೆ. ತಕ್ಷಣ ತೋಟದ ಮಾಲೀಕರಿಗೆ ಕರೆ ಮಾಡಿ ತಿಳಿಸಿ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಸೇರಿಸಿದೆವು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಕರಿಯಪ್ಪ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು