ಶುಕ್ರವಾರ, ಜೂನ್ 25, 2021
21 °C

ಜಿಲ್ಲೆಗೆ 14,900 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಗೆ ಸಂಸದ ಸಿದ್ದೇಶ್ವರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಗೆ ಎರಡು ತಿಂಗಳ ಕೋಟಾ 14,900 ಮೆಟ್ರಿಕ್ ಟನ್ ಸೇರಿ ಅಗತ್ಯವಿರುವಷ್ಟು ಯೂರಿಯಾವನ್ನು ಪೂರೈಕೆ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಸಾಯನಿಕ ಗೊಬ್ಬರಖಾತೆ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿದ್ದಾರೆ.

 ಒಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಮೆಕ್ಕೆಜೋಳಕ್ಕಾಗಿ ಜಿಲ್ಲೆಯಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಭತ್ತ ನಾಟಿ ಮಾಡಲು ಸಿದ್ಧತೆ ಆರಂಭಿಸಿರುವುದರಿಂದ ಯೂರಿಯಾ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಗೆ 13 ಸಾವಿರ ಮೆಟ್ರಿಕ್‍ ಟನ್‍ ಯೂರಿಯಾ ಪೂರೈಕೆಯಾಗಬೇಕಿತ್ತು. ಆದರೆ 9600 ಮೆಟ್ರಿಕ್‍ ಟನ್ ಮಾತ್ರ ಪೂರೈಕೆಯಾಗಿದೆ.

ಹರಪನಹಳ್ಳಿ ತಾಲ್ಲೂಕಿನ ರೈತರು ಬಳ್ಳಾರಿ ಬದಲಾಗಿ ದಾವಣಗೆರೆಯನ್ನೇ ಅವಲಂಭಿಸಿರುವುದರಿಂದ ಅವರಿಗೂ ತೊಂದರೆಯಾಗದಂತೆ ಜಿಲ್ಲೆಯಿಂದಲೇ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸಂಸದರು ಜಿಲ್ಲೆಯ ಜುಲೈ ತಿಂಗಳ ಕೋಟಾ 3400 ಮೆಟ್ರಿಕ್‍ಟನ್ ಹಾಗೂ ಆಗಸ್ಟ್ ತಿಂಗಳ ಕೋಟಾ 11,500 ಮೆಟ್ರಿಕ್‍ಟನ್‍ ಯೂರಿಯಾವನ್ನು ಶೀಘ್ರ ಪೂರೈಕೆ ಮಾಡುವಂತೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ

 ಸಂಸದರ ಮನವಿ ಮೇರೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಪೂರೈಕೆ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು