ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೇ ಟಿಕೆಟ್ ಕೊಡುತ್ತಾರೆ, ನಾನೇ ಗೆಲ್ಲುವೆ: ಸಂಸದ ಸಿದ್ದೇಶ್ವರ ವಿಶ್ವಾಸ

Published 22 ಫೆಬ್ರುವರಿ 2024, 5:16 IST
Last Updated 22 ಫೆಬ್ರುವರಿ 2024, 5:16 IST
ಅಕ್ಷರ ಗಾತ್ರ

ದಾವಣಗೆರೆ: ‘ಲೋಕಸಭಾ ಚುನಾವಣೆಯಲ್ಲಿ ನಾನು ಎಂದೂ ಟಿಕೆಟ್ ಕೇಳಿಲ್ಲ. ನನಗೇ ನೀಡುತ್ತ ಬಂದಿದ್ದಾರೆ, ಮುಂದೆಯೂ ನನಗೇ ಕೊಡುತ್ತಾರೆ. ಜನರು ಮುಂದೆಯೂ ಆಶೀರ್ವಾದ ಮಾಡಲಿದ್ದು, ನಾನೇ ಲೋಕಸಭಾ ಸದಸ್ಯನಾಗುವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಟಿಕೆಟ್ ಕೇಳೋಕೆ ಹೋಗಲ್ಲ, ಬೇಕಾದವರು ಕೇಳುತ್ತಾರೆ. ಯಾರಿಗೆ ಅವಕಾಶ ಕೊಟ್ಟರೂ ಕೆಲಸ ಮಾಡಬೇಕು. ಪಕ್ಷದ ತೀರ್ಮಾನವೇ ಅಂತಿಮ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಪುತ್ರನಿಗೆ ಟಿಕೆಟ್ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ಅದು ಭಗವಂತನ ಇಚ್ಛೆ. ಮಗ ಏಕೆ ಆಗಬಾರದು ಎಂದು ಮರು ಪ್ರಶ್ನಿಸಿದರು. ಈಗಲೂ ನಾನೇ ಸ್ಪರ್ಧಿಸುವೆ. ಜನರು ಆಶೀರ್ವಾದ ಮಾಡಿದರೆ ಗೆಲ್ಲುವೆ’ ಎಂದು ಹೇಳಿದರು.

‘ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂದು ಹಿಂದೆ ಕಾಂಗ್ರೆಸ್‌ನಲ್ಲಿ ಹೇಳುತ್ತಿದ್ದರು. ಈಗ ಕೆಲವರು ಅದನ್ನೇ ಹೇಳುತ್ತಿದ್ದಾರೆ. ಟಿಕೆಟ್‌ಗಾಗಿ ಸ್ಪರ್ಧೆ ಯಾವತ್ತೂ ಇದೆ, ಈಗ ಸ್ವಲ್ಪ ಪ್ರಬಲವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT