ಜಗಳೂರು: ಇಲ್ಲಿನ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಶನಿವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಂತೆಮುದ್ದಾಪುರ ಮೂಲದವರಾದ ಪಟ್ಟಣದ ನಿವಾಸಿ ಶೇಖಾವತ್ ಅವರ ಪುತ್ರರಾದ ಆಶಿಕ್ (10), ಅಫ್ರಾನ್ (8) ಹಾಗೂ ಅಬ್ದುಲ್ ಅವರ ಪುತ್ರ ಸೈಯದ್ ಫೈಜಾನ್ (9) ಮೃತಪಟ್ಟ ಬಾಲಕರು.

ರಾತ್ರಿಯಾದರೂ ಬಾಲಕರು ಮನೆಗೆ ಬಾರದಿರುವುದರಿಂದ ಪೋಷಕರು ಹುಡುಕಾಡಿದ್ದಾರೆ. ಸಮೀಪದ ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.