ಗುರುವಾರ , ಏಪ್ರಿಲ್ 15, 2021
30 °C

ನ್ಯಾಮತಿ: ಲಾರಿ ಮುಖಾಮುಖಿ ಡಿಕ್ಕಿ; ಚಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯಾಮತಿ: ಪಟ್ಟಣದ ಹೊರವಲಯದ ಕುಮಟಾ-ಕಾರಮಡಗಿ ಹೆದ್ದಾರಿಯ ದಾನಿಹಳ್ಳಿ-ನ್ಯಾಮತಿ ಸಮೀಪದ ಸೇತುವೆ ಬಳಿ ಗುರುವಾರ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊಳ್ಳೆಗಾಲದ ಚಾಲಕ ರಮೇಶ (43) ಮೃತಪಟ್ಟವರು. ‌ಮಂಗಳೂರಿನಿಂದ ಕೊಪ್ಪಳಕ್ಕೆ ಕೊಕ್ ತುಂಬಿಕೊಂಡು ಹೊರಟಿದ್ದ ಲಾರಿ ಹೊನ್ನಾಳಿ‌ಯಿಂದ ಶಿವಮೊಗ್ಗದತ್ತ ಹೋಗುತ್ತಿದ್ದ ಕೊಳವೆಬಾವಿಯ ಸಾಮಗ್ರಿ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೊಕ್ ತುಂಬಿದ್ದ ಲಾರಿಯ ಚಾಲಕನ ದೇಹ ಎರಡು ಲಾರಿಗಳ ಮಧ್ಯೆ ಸಿಲುಕಿತ್ತು.

ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ‌ನ್ಯಾಮತಿ ಪಿಎಸ್‌ಐ ಪಿ.ಎಸ್.ರಮೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು