ಹರಿಹರ: ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಜನರು ನದಿಪಾತ್ರಕ್ಕೆ ತೆರಳದಂತೆ ತಾಲ್ಲೂಕು ಆಡಳಿತ ಎಚ್ಚರಿಸಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ.

ಸದ್ಯಕ್ಕೆ ಕೆಲವೆಡೆ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಿಗ್ಗೆ ಇಲ್ಲಿನ ಗಂಗಾನಗರದ ಎರಡು ಮನೆಗಳ ಸಮೀಪಕ್ಕೆ ಆಗಮಿಸಿದ್ದ ನದಿ ನೀರು ಸಂಜೆ ಹಿಂದಕ್ಕೆ ಸರಿದಿದೆ. ರಾಘವೇಂದ್ರ ಮಠ ಹಿಂಭಾಗದ ತುಂಗಭದ್ರಾರತಿ ಮಂಟಪದ ಮೆಟ್ಟಿಲುಗಳು ಜಲಾವೃತವಾಗಿವೆ.

ನಿಷೇಧಾಜ್ಞೆ: ತಾಲ್ಲೂಕಿನ ಉಕ್ಕಡಗಾತ್ರಿ, ಗೋವಿನಹಾಳು, ಇಂಗಳಗೊಂದಿ, ಎಳೆಹೊಳೆ, ಮಳಲಹಳ್ಳಿ, ನಂದಿಗುಡಿ, ಪಾಳ್ಯ, ನಂದಿಗಾವಿ, ಬಿಳಸನೂರು, ಹುಲಗಿನಹೊಳೆ, ರಾಜನಹಳ್ಳಿ, ಹಲಸಬಾಳು, ತಿಮ್ಮಾಪುರ, ಗುತ್ತೂರು, ದೀಟೂರು, ಪಾಮೇನಹಳ್ಳಿ, ಚಿಕ್ಕಬಿದರಿ ಗ್ರಾಮಗಳ ನದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನದಿಯಲ್ಲಿ ಈಜಾಡುವುದು, ಬಟ್ಟೆ ಒಗೆಯುವುದು, ವಾಹನ, ದನಕರುಗಳನ್ನು ತೊಳೆಯುವುದು, ದನಕರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.