ಬುಧವಾರ, ಜೂನ್ 23, 2021
22 °C

ಉಕ್ಕಡಗಾತ್ರಿ: ಮನಸೆಳೆದ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಸೋಮವಾರ ಗೋಧೂಳಿ ಸಮಯದಲ್ಲಿ ವೈಭವದಿಂದ ಜರುಗಿತು.

ಬಗೆಬಗೆಯ ಹೂವಿನಿಂದ ಪಲ್ಲಕ್ಕಿಯನ್ನು ಅಲಂಕರಿಸಿದ್ದರು. ವೀರಭದ್ರ ದೇವರ ವೀರಗಾಸೆ, ಜಾನಪದ ಕಲಾತಂಡ, ಭಜನಾ ತಂಡಗಳು, ಜಾಂಚ್ ಮೇಳ, ಡೊಳ್ಳು, ಮಂಗಳವಾದ್ಯ, ಉತ್ಸವಕ್ಕೆ ಕಳೆ ತಂದಿದ್ದವು. ಭಕ್ತರು ‘ಕರಿಬಸವೇಶ್ವರ ಮಹಾರಾಜ್ ಕೀ ಜೈ, ಹರಹರ ಮಹಾದೇವ' ಎಂದು ಘೋಷಣೆ ಕೂಗಿದರು.

ಕಾರ್ತೀಕೋತ್ಸವದ ಅಂಗವಾಗಿ ಭಕ್ತರು ದೇವಾಲಯ ಹಾಗೂ ರಾಜಬೀದಿಯುದ್ದಕ್ಕೂ ಎಣ್ಣೆದೀಪ ಬೆಳಗಿದರು. ದೇವಾಲಯ ಹಾಗೂ ರಾಜಬೀದಿಯನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ರಾಜ್ಯದ ವಿವಿಧ ಭಾಗದಿಂದ ಬಂದ ಭಕ್ತರು ಭಕ್ತಿ ಸಮರ್ಪಿಸಿದರು. ಮಾಡಿದರು.

ಪೊಲೀಸರು ಭದ್ರತೆ ಒದಗಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು