ಗುರುವಾರ , ಮಾರ್ಚ್ 23, 2023
20 °C

ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಉಜಿರೆಯ ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ (250 ಅಂಕ) ಹಾಗೂ ಯ ಆಳ್ವಾಸ್‌ ಕಾಲೇಜು (228 ಅಂಕ) ನಗರದಲ್ಲಿ ಸೋಮವಾರ ಮುಕ್ತಾಯಗೊಂಡ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸೀನಿಯರ್‌ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.

ಪುರುಷರ ಸೀನಿಯರ್‌ ವಿಭಾಗದಲ್ಲಿ 229 ಅಂಕಗಳೊಂದಿಗೆ ಆಳ್ವಾಸ್‌ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ 157 ಅಂಕಗಳೊಂದಿಗೆ ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ ರನ್ನರ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ನ ಮಂಜುನಾಥ್‌ ಎಂ. ಹಾಗೂ ಮಹಿಳೆಯರ ವಿಭಾಗದಲ್ಲಿ ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌ನ ಲಕ್ಷ್ಮಿ ಬಿ. ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಯನ್ನು ಕೊರಳಿಗೇರಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲಾ ವೇಟ್‌ಲಿಫ್ಟಿಂಗ್‌ ಅಸೋಸಿಯೇಷನ್‌, ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್‌ ಅಸೋಸಿಯೇಷನ್‌, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಯಾಮ ಶಾಲೆ ಆಶ್ರಯದಲ್ಲಿ ಚಾಂಪಿಯನ್‌ಷಿಪ್‌ ಹಮ್ಮಿಕೊಳ್ಳಲಾಗಿತ್ತು.

ಬಾಲಕರ ಜೂನಿಯರ್‌ ವಿಭಾಗದಲ್ಲಿ 236 ಅಂಕಗಳೊಂದಿಗೆ ಆಳ್ವಾಸ್‌ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದು, ಸುಳ್ಯದ ಕೆ.ವಿ.ಜಿ. ಬಾರ್‌ಬೆಲ್‌ ಕ್ಲಬ್‌ 166 ಅಂಕಗಳೊಂದಿಗೆ ರನ್ನರ್ ಅಪ್‌ ಪ್ರಶಸ್ತಿ ಪಡೆದಿದೆ. ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ನ ಸುಬ್ರಹ್ಮಣ್ಯ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಬಾಲಕರ ಯೂತ್ ವಿಭಾಗದಲ್ಲಿ 245 ಅಂಕಗಳೊಂದಿಗೆ ಆಳ್ವಾಸ್‌ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ವೈಬಿಸಿ ಪುತ್ತೂರು 237 ಅಂಕಗಳೊಂದಿಗೆ ರನ್ನರ್‌ ಅಪ್‌ ಪ್ರಶಸ್ತಿ ಗಳಿಸಿದೆ. ಸುಧೀರ್‌ ಫಿಟ್ನೆಸ್‌ ಸೆಂಟರ್‌ನ ಸಂಕೇತ್‌ ಎಸ್‌. ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬಾಲಕಿಯರ ಜೂನಿಯರ್‌ ವಿಭಾಗದಲ್ಲಿ 247 ಅಂಕಳೊಂದಿಗೆ ಉಜಿರೆಯ ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆಳ್ವಾಸ್‌ ಕಾಲೇಜು 246 ಅಂಕಗಳೊಂದಿಗೆ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ. ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌ನ ಸಮೋದಿತಾ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಬಾಲಕಿಯರ ಯೂತ್‌ ವಿಭಾಗದಲ್ಲಿ ಆಳ್ವಾಸ್‌ ಕಾಲೇಜು ಮೂಡಬಿದರೆ 227 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದರೆ, ಡಿವೈಇಎಸ್‌ ಬೆಂಗಳೂರು 135 ಅಂಕಗಳೊಂದಿಗೆ ರನ್ನರ್‌ ಅಪ್‌ ಪ್ರಶಸ್ತಿ ಪಡೆಯಿತು. ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌ನ ಶಿವಾನಿ ಪ್ರಣೀಶ್‌ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಫಲಿತಾಂಶಗಳು:

ಪುರುಷರು: 109 ಕೆ.ಜಿ. ಮೇಲಿನ ಸೀನಿಯರ್‌: ಕುಶಾಲ್‌ ಗೌಡ (ಆಳ್ವಾಸ್‌ ಕಾಲೇಜು, ಮೂಡಬಿದರೆ)–1, ನಿಶಾಂತ್‌ (ಆಳ್ವಾಸ್‌ ಕಾಲೇಜು)–2, ರಾಘವೇಂದ್ರ ಎಚ್‌. (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–3; ಜೂನಿಯರ್‌: ಸಮೀರ್‌ (ಮಂಗಳೂರು ಥ್ರೋವ್ಸ್‌ ಅಕಾಡೆಮಿ)–1, ಕ್ರಿಸ್‌ ಡಿಲಿಮಾ (ಐರನ್‌ ಡೆನ್‌ ಜಿಮ್‌, ಮಂಗಳೂರು)–2;

89 ಕೆ.ಜಿ. ಸೀನಿಯರ್‌: ಭರತ್‌ ಕೆ.ಎಸ್‌. (ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌)–1, ಸಚಿನ್‌ ಕುಮಾರ್‌ (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–2, ಉಲ್ಲಾಸ್ ಗೌಡ (ಅಕಾಡೆಮಿ ಆಫ್‌ ವೇಟ್‌ಲಿಫ್ಟಿಂಗ್‌, ಮೈಸೂರು)–3; ಜೂನಿಯರ್‌: ದಿಶಾಂತ್‌ (ಆಳ್ವಾಸ್‌ ಕಾಲೇಜು)–1, ಭೂಪೇಂದ್ರ (ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ್‌ ಕ್ಲಬ್‌)–2, ದರ್ಶನ್‌ (ಕೆ.ವಿ.ಜಿ. ಬಾರ್‌ಬೆಲ್‌ ಕ್ಲಬ್‌, ಸುಳ್ಯ)–3; ಯೂತ್‌: ತಿಲಕ್‌ (ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌)–1, ಪರಶುರಾಮ (ಆಳ್ವಾಸ್‌ ಕಾಲೇಜು)–2, ಶಬರೀಶ ಬಿ.ರೈ (ವೈ.ಬಿ.ಸಿ., ಪುತ್ತೂರು)–3; 

81 ಕೆ.ಜಿ. ಸೀನಿಯರ್‌: ರಜತ್‌ ರೈ (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–1, ಸಂತೋಷ್‌ (ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ್‌ ಕ್ಲಬ್‌)–2, ನಿಶ್ಚಲ್‌ ಆರ್‌.ಆರ್‌. (ಅಕಾಡೆಮಿ ಆಫ್‌ ವೇಟ್‌ಲಿಫ್ಟಿಂಗ್‌, ಮೈಸೂರು)–3; ಜೂನಿಯರ್‌: ನಿಶ್ಚಲ್‌ ಆರ್‌.ಆರ್‌. (ಅಕಾಡೆಮಿ ಆಫ್‌ ವೇಟ್‌ಲಿಫ್ಟಿಂಗ್‌, ಮೈಸೂರು)–1, ಸ್ವರಾಜ್‌ ಎಸ್‌. (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–2, ಕಿಶೋರ ಕುಮಾರ್‌ ಆರ್‌.ಕೆ. (ವೈ.ಬಿ.ಸಿ., ಪುತ್ತೂರು)–3; ಯೂಥ್‌: ಸ್ವರಾಜ್‌ ಎಸ್‌. (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–1, ಸಚಿನ್‌ ಎಸ್‌.ಕೆ. (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–2, ಸ್ವರೂಪ ಎಚ್‌.ಎ. (ಆಳ್ವಾಸ್‌ ಕಾಲೇಜು)–3; 

73 ಕೆ.ಜಿ. ಸೀನಿಯರ್‌: ನವೀನ ಚಂದ್ರ (ಎಸ್‌ಡಿಎಂ ಸ್ಪೋರ್ಟ್ಸ್‌ ಕ್ಲಬ್‌)–1, ಅಕ್ಷಯ್‌ (ಆಳ್ವಾಸ್‌ ಕಾಲೇಜು)–2, ಮಹಮ್ಮದ್‌ ಖಿಜಾರ್‌ (ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌)–3; ಜೂನಿಯರ್‌: ಚೇತನ್‌ ಕುಮಾರ್‌ (ಆಳ್ವಾಸ್‌ ಕಾಲೇಜು)–1, ಸಂಜಯ ಡಿ. (ಸುಧೀರ್ ಫಿಟ್ನೆಸ್‌ ಸೆಂಟರ್‌)–2, ಶ್ರೇಯಸ್‌ ಕೆ. (ವೈ.ಬಿ.ಸಿ., ಪುತ್ತೂರು)–3; ಯೂಥ್‌: ಶ್ರೀನಿವಾಸ್‌ (ಆಳ್ವಾಸ್‌ ಕಾಲೇಜು)–1, ಸೃಜನ್ ರೈ (ವೈ.ಬಿ.ಸಿ, ಪುತ್ತೂರು)–2, ಯತೀಶ್‌ ಕೆ. (ವೈ.ಬಿ.ಸಿ, ಪುತ್ತೂರು)–3;

67 ಕೆ.ಜಿ. ಸೀನಿಯರ್‌: ಮಂಜುನಾಥ್‌ ಎಂ. (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–1, ಕೃಷ್ಣ ಎಸ್‌. (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–2, ತಿಪ್ಪಣ್ಣ ಲಕ್ಕಣ್ಣವರ (ಅಕಾಡೆಮಿ ಆಫ್‌ ವೇಟ್‌ಲಿಫ್ಟಿಂಗ್‌, ಮೈಸೂರು)–3; ಜೂನಿಯರ್‌: ತಿಪ್ಪಣ್ಣ ಲಕ್ಕಣ್ಣವರ (ಅಕಾಡೆಮಿ ಆಫ್‌ ವೇಟ್‌ಲಿಫ್ಟಿಂಗ್‌, ಮೈಸೂರು)–1, ಪ್ರಜ್ವಲ್‌ (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–2, ಶಿವಾನಂದ (ಆಳ್ವಾಸ್‌ ಕಾಲೇಜು)–3; ಯೂಥ್‌: ಸಂಕೇತ್‌ ಎಸ್‌. (ಸುಧೀರ್‌ ಫಿಟ್‌ನೆಸ್‌ ಸೆಂಟರ್‌)–1, ವಜ್ರದತ್ತ ಜಾಧವ್‌ (ದಾವಣಗೆರೆ ಜಿಲ್ಲೆ ವೇಟ್‌ಲಿಫ್ಟಿಂಗ್‌ ಸಂಸ್ಥೆ)–2, ಸಾಗರದೀಪ್‌ (ಆಳ್ವಾಸ್‌ ಕಾಲೇಜು)–3; 

ಮಹಿಳೆಯರು: 87 ಕೆ.ಜಿ. ಮೇಲಿನ ಸೀನಿಯರ್‌: ಸಿತಾರಾ (ಆಳ್ವಾಸ್‌ ಕಾಲೇಜು)–1, ಸುಹಾನಿ (ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌)–2; ಜೂನಿಯರ್‌: ಸಿತಾರಾ (ಆಳ್ವಾಸ್‌ ಕಾಲೇಜು)–1, ಜಿ. ಪೂಜಾ ವೈ. (ಡಿ.ಸಿ.ಸಿ., ಮಂಗಳೂರು)–2;

87 ಕೆ.ಜಿ. ಸೀನಿಯರ್‌: ಕಾವ್ಯಶ್ರೀ ಇ. (ಎಸ್‌.ಐ.ಸಿ.ಎಂ)–1, ದಿವ್ಯಾ ಎನ್‌.ಪಿ. (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–2; ಜೂನಿಯರ್‌: ದಿವ್ಯಾ ಎನ್‌.ಪಿ. (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–1; ಧನ್ಯಶ್ರೀ (ವೈ.ಬಿ.ಸಿ, ಪುತ್ತೂರು)–2;

81 ಕೆ.ಜಿ. ಸೀನಿಯರ್‌: ನಿಶೇಲ್‌ (ಮಂಗಳೂರು ಥ್ರೋವ್ಸ್‌ ಅಕಾಡೆಮಿ)–1, ಯಶಸ್ವಿನಿ (ಆಳ್ವಾಸ್‌ ಕಾಲೇಜು)–2, ದೊಳ್ಳೇಶ್ವರಿ ಕೆ. (ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್‌ ಕ್ಲಬ್‌)–3; ಜೂನಿಯರ್‌: ನಿಶೇಲ್‌ (ಮಂಗಳೂರು ಥ್ರೋವ್ಸ್‌ ಅಕಾಡೆಮಿ)–1, ಯಶಸ್ವಿನಿ (ಆಳ್ವಾಸ್‌ ಕಾಲೇಜು)–2, ನಕುಶಾ ಪಿ. ಪಾಟೀಲ (ಡಿವೈಎಸ್‌ಇ, ಬೆಳಗಾವಿ)–3;

76 ಕೆ.ಜಿ. ಸೀನಿಯರ್‌: ನಿಷ್ಮಿತಾ (ಆಳ್ವಾಸ್‌ ಕಾಲೇಜು)–1; ಜೂನಿಯರ್‌: ನಿಷ್ಮಿತಾ (ಆಳ್ವಾಸ್‌ ಕಾಲೇಜು)–1, ಅಮೂಲ್ಯ ಆರ್‌. ರಾವ್‌ (ಡಿ.ವೈ.ಇ.ಎಸ್‌., ಬೆಂಗಳೂರು)–2, ನಿಕಿತಾ (ಐರನ್‌ ಡೆನ್‌ ಜಿಮ್‌, ಮಂಗಳೂರು)–3; ಯೂಥ್‌: ಅಮೂಲ್ಯ ಆರ್‌. ರಾವ್‌ (ಡಿ.ವೈ.ಇ.ಎಸ್‌., ಬೆಂಗಳೂರು)–1, ಪ್ರತೀಕ್ಷಾ (ಆಳ್ವಾಸ್‌ ಕಾಲೇಜು)–2, ನಿಕಿತಾ (ಐರನ್‌ ಡೆನ್‌ ಜಿಮ್‌, ಮಂಗಳೂರು)–3; 

71 ಕೆ.ಜಿ. ಸೀನಿಯರ್‌: ತನುಷಾ (ಆಳ್ವಾಸ್‌ ಕಾಲೇಜು)–1, ತ್ರಿಶಲಾ (ಆಳ್ವಾಸ್‌ ಕಾಲೇಜು)–2, ಜಸ್ಮಿತಾ ಡಿ.ಆರ್‌. (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–3; ಜೂನಿಯರ್‌: ತನುಷಾ (ಆಳ್ವಾಸ್‌ ಕಾಲೇಜು, ಮೂಡಬಿದರೆ)–1, ಜಸ್ಮಿತಾ ಡಿ.ಆರ್‌. (ಎಸ್‌.ಡಿ.ಎಂ. ಸ್ಪೋರ್ಟ್ಸ್‌ ಕ್ಲಬ್‌)–2, ವಿನಿಷಾ (ವೈ.ಬಿ.ಸಿ., ಪುತ್ತೂರು)–3; ಯೂಥ್‌: ರಿಕ್ತಾ ಕೆ. (ಡಿ.ಸಿ.ಸಿ, ಮಂಗಳೂರು)–1, ವಿತಾಶ್ರೀ (ವೈ.ಬಿ.ಸಿ., ಪುತ್ತೂರು)–2, ಶ್ರವಿ ವಿ. ಶೆಟ್ಟಿ (ಆಳ್ವಾಸ್‌ ಕಾಲೇಜು, ಮೂಡಬಿದಿರೆ)–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು