ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಾಸ್ಕ್ ಧರಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

Last Updated 1 ಜುಲೈ 2020, 5:19 IST
ಅಕ್ಷರ ಗಾತ್ರ

ದಾವಣಗೆರೆ: ಮನೆ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದ ವೇಳೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದ ಸರಗಳ್ಳನೊಬ್ಬ ಮಹಿಳೆ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ದೇವರಾಜ ಅರಸು ಲೇಔಟ್‌ನ ‘ಸಿ’ ಬ್ಲಾಕ್‌ನ 3ನೇ ಕ್ರಾಸ್‌ನ ನಿವಾಸಿ ಕೆ.ಎಸ್‌. ಚಂದ್ರಮ್ಮ ಸರ ಕಳೆದುಕೊಂಡವರು. ಕಾಂಪೌಂಡ್‌ನ ಮುಂಭಾಗ ಕಸ ಕುಡಿಸುತ್ತಿದ್ದ ವೇಳೆ ನೀಲಿ ಬಣ್ಣದ ಶರ್ಟ್‌, ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದ ಯುವಕನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಏಕಾಏಕಿ ₹1.06 ಲಕ್ಷ ಮೌಲ್ಯದ ಎರಡೆಳೆಯ ಸರ ಕಿತ್ತುಕೊಂಡು ಓಡಿಹೋಗಿದ್ದಾನೆ.

ಬಸವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

===

₹4.50 ಲಕ್ಷ ಮೌಲ್ಯದ ಆಭರಣ ಕಳವು

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಮನೆಯ ತಗಡಿನ ಸಂದಿಯಲ್ಲಿಟ್ಟ ಇಟ್ಟಿದ್ದ ಬೀಗದ ಕೀಯನ್ನು ತೆಗೆದುಕೊಂಡು ಮನೆಯ ಒಳಗೆ ನುಗ್ಗಿದ ಕಳ್ಳರು 140 ಗ್ರಾಂ ಬಂಗಾರದ ಒಡವೆ, 100 ಗ್ರಾಂ ತೂಕದ ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿದ್ದಾರೆ.

ಗ್ರಾಮದ ಜಿ.ಎಸ್‌.ರಮೇಶ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದು, ಮನೆಯ ಒಳಗಡೆ ಎರಡು ಗಾಡ್ರೇಜ್ ಬೀರುಗಳ ಬಾಗಿಲು ಮುರಿದ ಕಳ್ಳರು ಮುರಿದು ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಆಭರಣವನ್ನು ಕಳ್ಳತನ ಮಾಡಿದ್ದಾರೆ.

₹ 4.50 ಲಕ್ಷ ಮೌಲ್ಯದ ಚಿನ್ನದ ಆಭರಣ, ₹5 ಸಾವಿರ ಬೆಲೆ ಬಾಳುವ ಬೆಳ್ಳಿ ಹಾಗೂ ₹31 ಸಾವಿರವನ್ನು ಕಳವು ಮಾಡಿ, ಹಿಂಬಾಗಿಲ ಮೂಲಕ ಹೊರ ಹೋಗಿದ್ದಾರೆ.

ಮನೆಯ ಒಳಗಡೆ ಖಾರದ ಪುಡಿ ಚೆಲ್ಲಿ ಹೋಗಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==

ನೇರ್ಲಿಗೆ ಶಾಲೆಯಲ್ಲಿ ಕಂಪ್ಯೂಟರ್ ಕಳವು

ಮಾಯಕೊಂಡ: ಸಮೀಪದ ನೇರ್ಲಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಕಂಪ್ಯೂಟರ್‌ ಮತ್ತು ಸಿಪಿಯು ಕಳವು ಮಾಡಲಾಗಿದೆ.‌

ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಇದ್ದುದರಿಂದ ಶಾಲೆಗೆ ಬೀಗ ಹಾಕಲಾಗಿತ್ತು. ಜೂನ್‌ 21ರಂದು ಶಾಲೆಯ ಬಾಗಿಲು ತೆರೆದಾಗ ಕಂಪ್ಯೂಟರ್ ಕೊಠಡಿ ಬೀಗ ಹಾಕಿದಂತೆ ಇತ್ತು. ಜೂನ್ 29ರಂದು ನೋಡಿದಾಗ 26 ಮಾನಿಟರ್ ಹಾಗೂ 26 ಸಿಪಿಯು ಕಳ್ಳತನವಾಗಿದೆ. ಇವುಗಳ ₹5.20 ಲಕ್ಷ ಎಂದು ಅಂದಾಜಿಸಲಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನಮ್ಮ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

===

ಬೈಕ್ ಅಪಘಾತ ಯುವಕ‌ ಸಾವು

ಮಾಯಕೊಂಡ: ಸಮೀಪದ ಕೊಡಗನೂರು ಕ್ರಾಸ್ ಬಳಿ ಮಂಗಳವಾರ ಬೈಕ್ ಅಪಘಾತದಲ್ಲಿ ಯುವಕರೊಬ್ಬರು ಮೃತಪಟ್ಟಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಅಳವುದರ ಗ್ರಾಮದ ವೀರೇಶ್ ಮೃತಪಟ್ಟವರು.

ಕೀಟನಾಶಕ ತರಲೆಂದು ಅದೇ ಗ್ರಾಮದ‌ ಸಿದ್ದನಗೌಡ ಅವರೊಂದಿಗೆ ಜೂನ್‌ 29ರ ರಾತ್ರಿ ಕೊಡಗನೂರು ಕ್ರಾಸ್‌ಗೆ ಹೊರಟಿದ್ದರು. ಆ ವೇಳೆ ಅಪಘಾತವಾಗಿ,ವೀರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಪಘಾತದಲ್ಲಿ ಗಾಯಗೊಂಡ‌ ಸಿದ್ದನಗೌಡ ಮಾಯಕೊಂಡ ‌ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಸಿಪಿಐ ಮಂಜುನಾಥ್ ಪಿಎಸ್ಐ ವೀರಭದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು.

===

ಮಟ್ಕಾ ಚೀಟಿ: ₹1.77 ಲಕ್ಷ ವಶ

ದಾವಣಗೆರೆ: ಇಮಾಮ್‌ನಗರದಲ್ಲಿ ಮಟ್ಕಾದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ ₹1.77 ಲಕ್ಷ ವಶಪಡಿಸಿಕೊಂಡಿದ್ದಾರೆ.

ಕೆಟಿಜೆ ನಗರದ ನಯಾಜ್ ಬೇಗ್, ಹಸನ್ ಸಾಬ್, ಸೈಯದ್ ಸಲ್ಮಾನ್, ನವಾಬ್ ಜಾನ್ ಬಂಧಿತರು. ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT