ಗುರುವಾರ , ಫೆಬ್ರವರಿ 20, 2020
27 °C

ಆರು ಮಂದಿ ಜೊತೆ ಸೇರಿ ಪತಿಯನ್ನು ಅಪಹರಿಸಿದ್ದ ಪತ್ನಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಟ್ಟಿಕೊಂಡ ಗಂಡನನ್ನೇ ಆರು ಮಂದಿ ಜೊತೆ ಸೇರಿ ಕಿಡ್ನಾಪ್ ಮಾಡಿದ ಆರೋಪದ ಮೇಲೆ ಪತ್ನಿಯನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಗೀತಾ ಎಂಬಾಕೆಯೇ ಪೊಲೀಸರ ಅತಿಥಿಯಾದ ಪತ್ನಿ. ಶ್ರೀನಿವಾಸ್ ಅಪಹರಣಕ್ಕೊಳಗಾಗಿದ್ದ ಪತಿ.

ಕಳೆದ ಎರಡು ವರ್ಷದಿಂದ ಪತಿ, ಪತ್ನಿ ದೂರ ಇದ್ದರು. ಆದ್ರೆ ಪತ್ನಿಯ ನಡುವಳಿಕೆ ಸರಿ ಇಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಪತಿ ಶ್ರೀನಿವಾಸ್ ತೊರೆದಿದ್ದ. ಆದ್ರೆ, ಕಳೆದ ಎರಡು ದಿನಗಳ ಹಿಂದೆ ಪತ್ನಿ ಸಂಗೀತಾ ಹಾಗೂ 6 ಜನ ಸಹಚರರು ಪತಿಯ ಕಿಡ್ನಾಪ್ ಮಾಡಿದ್ದರು.

ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಬರುವಾಗ ಶ್ರೀನಿವಾಸ್ ನನ್ನು ಪ್ಯಾಸೆಂಜರ್ ಆಪೆ ಗಾಡಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು