ದಾವಣಗೆರೆ: ಎಲೆ ಮರೆಯ ಕಾಯಿಯಂತೆ ಇದ್ದು, ಸಾಧನೆ ಮಾಡುತ್ತಿರುವ ಯುವ ಸಾಧಕರನ್ನು ಗುರುತಿಸಿ ‘ಪ್ರಜಾವಾಣಿ’ಯಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಮಾಣಪತ್ರ ವಿತರಿಸಿ, ಸನ್ಮಾನಿಸಿದರು.

ಪ್ರಚಾರದ ಹಂಗಿಲ್ಲದೇ ಹಲವರಿಗೆ ಸ್ಫೂರ್ತಿಯಾದ ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ 20 ಜನರನ್ನು ‘ಪ್ರಜಾವಾಣಿ–2020’ ಯುವ ಸಾಧಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರಲ್ಲಿ 15 ಸಾಧಕರು ಕಾರ್ಯಕ್ರಮಕ್ಕೆ ಬಂದು ಪ್ರಶಂಸಾಪತ್ರಗಳನ್ನು ಪಡೆದುಕೊಂಡರು.

ದಾವಣಗೆರೆ:

ಹರಪನಹಳ್ಳಿಯ ಮಹೇಶ್ ಎಲ್.ಎ (ಸಂಗೀತ), ಬಸವಾಪಟ್ಟಣದ ಎಲ್.ಜಿ. ಮಧುಕುಮಾರ್ (ಶಿಕ್ಷಣ ಹಾಗೂ ಸಾಹಿತ್ಯ), ದಾವಣಗೆರೆಯ ಅಲೋಕ್ ಆರಾಧ್ಯ (ಕ್ರೀಡೆ–ಟೆನಿಸ್), ಇ. ಶ್ರೀನಿವಾಸ್ (ಕ್ರೀಡೆ–ಕುಸ್ತಿ), ಜಗಳೂರು ತಾಲ್ಲೂಕಿನ ದಿದ್ದಿಗಿ ಗ್ರಾಮದ ಡಿ.ಎಸ್. ಪ್ರಶಾಂತ್ (ಬಡ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ), ಚಿನ್ನಸಮುದ್ರ ಗ್ರಾಮದ ಸಿ.ಎಚ್. ಉಮೇಶ್ (ಜನಪದ ಗಾಯಕ) ಅವರನ್ನು ಗೌರವಿಸಲಾಯಿತು. ದಾವಣಗೆರೆಯ ಶಿಲ್ಪಿ ಹರೀಶ್ರಾವ್ ಎಸ್. ಅನುಪಸ್ಥಿತರಾಗಿದ್ದರು.

ಶಿವಮೊಗ್ಗ:

ಆನಂದಪುರದ ಜಿ.ನಾಗರಾಜ ತೊಂಬ್ರಿ (ಜನಪದ), ಸೊರಬ ತಾಲ್ಲೂಕಿನ ಹೆಚ್ಚೆ ಗ್ರಾಮದ ವಿಶ್ವನಾಥ್ ಜಿ.ಇಕ್ಕೇರಿ (ಸಂಗೀತ–ಯಕ್ಷಗಾನ), ಕ್ಯಾತಿನಕೊಪ್ಪ ಗ್ರಾಮದ ಎಸ್.ರುದ್ರೇಶ್ ಆಚಾರ್ (ಸಾಹಿತ್ಯ), ವಿನೋಬ ನಗರದ ಸಿ.ಡಿ. ರಕ್ಷಿತಾ (ನೃತ್ಯ ಹಾಗೂ ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ನಿಶಾ ಪಾಟ್ಕರ್ ಅವರ ಪರವಾಗಿ ಅವರ ತಂದೆ ನಾಗರಾಜ್ ಪಾಟ್ಕರ್ ಹಾಗೂ ತಾಯಿ ಭಾರತಿ ಅವರು ಹಾಗೂ ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಗೆ ಚಂದ್ರಶೇಖರ್ ಹಿರೇಗೋಣಿಗೆರೆ ಪರವಾಗಿ ಅವರ ಪತ್ನಿ ಅನುಪಮಾ ಪ್ರಶಸ್ತಿಪತ್ರ ಸ್ವೀಕರಿಸಿದರು. ಭದ್ರಾವತಿಯ ಮುನೀರ್ ಬಾಷಾ (ಕ್ರೀಡೆ–ಕೊಕ್ಕೊ), ಸುಪ್ರಿಯಾ ಎಸ್.ರಾವ್ (ರಂಗಭೂಮಿ ಹಾಗೂ ಕಿರುತೆರೆ) ಅನುಪಸ್ಥಿತರಾಗಿದ್ದರು.

ಚಿತ್ರದುರ್ಗ:

ಇಂಗಳದಾಳು ಗ್ರಾಮದ ರಂಗಸ್ವಾಮಿ (ಸಮಾಜ ಸೇವೆ) ಚಿತ್ರದುರ್ಗದ ತೇಜಸ್ವಿನಿ ಬಿ.ಯು (ನೃತ್ಯ) ಅವರನ್ನು ಗೌರವಿಸಲಾಯಿತು. ಹೋಟೆಲ್ನಲ್ಲಿ ಮಾಣಿಯಾಗಿದ್ದುಕೊಂಡು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ ಆರ್ಯ ಕ್ರಿಶ್ (ಕೃಷ್ಣ) ಅವರನ್ನು ಸನ್ಮಾನಿಸಿದ್ದು ವಿಶೇಷ. ಪರಶುರಾಂಪುರದ ಪಾತಪ್ಪನಗುಡಿಯ ನಾಗರಾಜ್ ಇ. (ಕ್ರೀಡೆ), ಚಿತ್ರದುರ್ಗದ ಸಿ.ವಿ. ಮಂಜು (ಕಿರುಚಿತ್ರ ನಿರ್ಮಾಣ–ನಿರ್ದೇಶನ) ಹಾಜರಿರಲಿಲ್ಲ.

ಅನಿವಾರ್ಯ ಕಾರಣಗಳಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಸಾಧಕರ ಸಂಕ್ಷಿಪ್ತ ಪರಿಚಯವನ್ನೂ ಮಾಡಿಕೊಡಲಾಯಿತು.

ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ತೀರ್ಪುಗಾರರಾದ ಸಮಾಜ ಸೇವಕಿ ಡಾ. ಶಾಂತಾಭಟ್ ಹಾಗೂ ಕಲಾವಿದ ಆರ್.ಟಿ.ಅರುಣ್ ಕುಮಾರ್ ವೇದಿಕೆಯಲ್ಲಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅವರೂ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ವಿಶಾಖ ಎನ್. ಸಾಧಕರ ಪರಿಚಯ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.