ಮಲೇಬೆನ್ನೂರು: ದೃಶ್ಯ ಮಾಧ್ಯಮಗಳ ಪ್ರಭಾವ ಹೆಚ್ಚಾಗಿರುವುದರಿಂದ ಶ್ರೀಮಂತ ಜನಪದ ಸಾಹಿತ್ಯ, ಕಲೆಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಜನಪದ ಕಲಾವಿದ ಹೊಸದುರ್ಗದ ಬೊಮ್ಮಲಿಂಗಪ್ಪ ಆತಂಕ ವ್ಯಕ್ತಪಡಿಸಿದರು.

ಸಮೀಪದ ಉಕ್ಕಡಗಾತ್ರಿಯಲ್ಲಿ ಭಾನುವಾರ ಜಿಲ್ಲಾ ಮಟ್ಟದ ಜನಪದ ಕಲಾ ಉತ್ಸವದಲ್ಲಿ ಉಪನ್ಯಾಸ ನೀಡಿದರು. ಜನಪದ ಕಲೆ, ಗೀತೆಗಳು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರಿಂದ ರಚಿತವಾಗಿಲ್ಲ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಂದ ರೂಪಿತವಾಗಿದೆ. ಹುಟ್ಟು, ಸಾವು, ಹಬ್ಬ, ಮಳೆ, ಬೆಳೆ, ಒಕ್ಕಲು ಮಾಡುವುದು, ದೇವತಾ ಉತ್ಸವ ಸೇರಿ ಎಲ್ಲ ಕಡೆ ಜನಪದ ಕಲೆ ಪಸರಿಸಿದೆ. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಹೆಚ್ಚಾಗಿದ್ದು, ದೇಸಿ ಕಲೆ ಕಮರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿ, ‘ಜನಪದ ಕಲೆ ಗ್ರಾಮೀಣರ ಜೀವನಾಡಿಯಾಗಿದೆ. ಭೈರನಪಾದ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಭರವಸೆ ನೀಡಿದರು.

ಸರ್ಕಾರ ಜನಪದ ಕಲೆ ಉಳಿಸಿ ಬೆಳೆಸಲು ಜನಪದ ಉತ್ಸವ ನಡೆಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಕುಮಾರ್ ಬೆಕ್ಕೇರಿ ಹೇಳಿದರು.

ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಕೆ,ಎನ್. ಹನುಮಂತಪ್ಪ ಜನಪದ ಕಲೆ ಸಂಸ್ಕೃತಿ ಕುರಿತು ಮಾತನಾಡಿದರು. ಜನಪದ ಕಲಾವಿದ ಜಿ. ಸಿದ್ದನಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್ ಸ್ವಾಗತಿಸಿದರು. ಉಮೇಶ್ ನಾಡಗೀತೆ ಹಾಡಿದರು. ಶಿಕ್ಷಕ ಸಿದ್ದಪ್ಪ ಬಸಲಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಜಯಮ್ಮ, ಅರ್ಜುನ್ ಹರೀಶ್, ಉಪಾಧ್ಯಕ್ಷೆ ಮಂಜುಳಾ ರಾಮಪ್ಪ, ಹವ್ಯಾಸಿ ಗ್ರಾಮೀಣ ಕಲಾವಿದರ ಸಂಘದ ಎನ್ .ಎಸ್. ರಾಜು, ಬೀದಿ ನಾಟಕ ಕಲಾವಿದ ಜಿಗಳಿ ರಂಗನಾಥ್, ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲೆಯ ವಿವಿಧ ಭಾಗಗಳ ಕಲಾವಿದರು ಇದ್ದರು.

ಕಲಾತಂಡದ ಮೆರವಣಿಗೆ: ವೀರಗಾಸೆ, ಕೋಲಾಟ, ಡೊಳ್ಳು, ತಮಟೆ, ಭಜನಾ ಮೇಳ, ಕೀಲು ಕುದುರೆ ಕುಣಿತ, ಗೊರವರ ಪದ, ಗೊಂಬೆ ಕುಣಿತ, ಜನಪದ ಗೀತೆ ಜನಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.