`ನಾನಾಗಲೇ 105 ವಸಂತಗಳನ್ನು ಕಂಡಿದ್ದೇನೆ, ವಯೋಮಾನಕ್ಕೆ ತಕ್ಕಂತೆ ಸಣ್ಣಪುಟ್ಟ ದೋಷಗಳು ನನ್ನಲ್ಲಿ ಕಾಣಿಸಿಕೊಂಡಿದ್ದರೂ, ಸಂಪೂರ್ಣವಾಗಿ ಶಿಥಿಲಗೊಂಡು ಬಿದ್ದು ಹೋಗುವಷ್ಟು ಶಕ್ತಿಹೀನನಾಗಿರಲಿಲ್ಲ. ಆದರೂ, ಹೊಸ ನೀರಿಗೆ ದಾರಿ ನೀಡಬೇಕಾದರೆ ಹಳೇ ನೀರು ಜಾಗ ಖಾಲಿ ಮಾಡಲೇಬೇಕು~ ಎಂಬ ಸಿದ್ಧಾಂತಕ್ಕೆ ಬದ್ಧನಾಗಿ ನನ್ನ ಸಾರ್ವಜನಿಕ ಜೀವನಕ್ಕೆ ಅಂತಿಮ ಹಾಡುತ್ತಿದ್ದೇನೆ...

-ಇದು ಹರಿಹರ ನಗರದ ಹೃದಯ ಭಾಗದಲ್ಲಿ 1907ರಿಂದ ಸಾರ್ವಜನಿಕ ಸೇವೆಗೆ ತನ್ನನ್ನು ಒಪ್ಪಿಸಿಕೊಂಡಿರುವ ತಾಲ್ಲೂಕು ಕಚೇರಿಯ ಆತ್ಮಾವಲೋಕನ.ಸ್ವಾತಂತ್ರ್ಯಪೂರ್ವದಿಂದಲೂ ಬ್ರಿಟಿಷರ ಆಳ್ವಿಕೆಯಲ್ಲೂ ನನ್ನನ್ನು ತಾಲ್ಲೂಕು ಕಚೇರಿಯನ್ನಾಗಿ ಬಳಸುತ್ತಾ ಬಂದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಾಕ್ಕಾಗಿ ಇದೇ ಕಚೇರಿಯ ಎದುರು ನಡೆಸಿದ ಸತ್ಯಾಗ್ರಹ, ಧರಣಿ, ಪ್ರತಿಭಟನೆಗೆ ನಾನು ಸಾಕ್ಷಿಯಾಗ್ದ್ದಿದೇನೆ.

1942ರಲ್ಲಿ ಪುಟ್ಟ ಸೋಮಣ್ಣ ಎಂಬುವವರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಆವರಣದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ನಡೆಯುತ್ತಿತ್ತು. ನೂರಾರು ಸ್ವಾತಂತ್ರ್ಯ ಯೋಧರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆ ಗುಂಪಿನಲ್ಲಿದ್ದ ಹದಿಯರೆಯದ ಯುವಕನೊಬ್ಬ `ಭಾರತ ಮಾತಾಕೀ ಜೈ...~ ಎಂದು ಘೋಷಣೆ ಕೂಗುತ್ತಾ ಓಡಿ ಬಂದು ತಾಲ್ಲೂಕು ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಚಕ್ಕನೆ ಜನಜಂಗುಳಿಯಲ್ಲಿ ಮಾಯವಾದ.

ನಂತರ, ಆತನ ಹೆಸರು ಎನ್.ಎಂ. ಚಂದ್ರಶೇಖರಯ್ಯ ಎಂದು ಗೊತ್ತಾಯಿತು. ಆತನ ಚಾಕಚಕ್ಯತೆ, ಧೈರ್ಯ ಹಾಗೂ ಸಾಹಸಗಳು ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಹಸಿರಾಗಿವೆ.

ಸ್ವಾತಂತ್ರ್ಯಾ ನಂತರವೂ ನನ್ನನ್ನು ತಾಲ್ಲೂಕು ಕಚೇರಿಯನ್ನಾಗಿ ಬಳಸಲಾಯಿತು. ನನ್ನ ಮಡಿಲಲ್ಲಿ ತಾಲ್ಲೂಕುಮಟ್ಟದ ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸರ್ಕಾರಿ ಖಜಾನೆಗೆ ಆಶ್ರಯ ನೀಡಿದ್ದೆ. 105 ವರ್ಷಗಳ ಸಾರ್ವಜನಿಕ ಸೇವೆಯಲ್ಲಿ ಸಾರ್ವಜನಿಕರ ನೋವಿಗೆ ಸ್ಪಂದಿಸಿದ ಹಲವಾರು ಸಹೃದಯಿ ಅಧಿಕಾರಿಗಳನ್ನು ಕಂಡಿದ್ದೇನೆ.

ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರದ ಆದ್ಯತೆಗೆ ತಕ್ಕಂತೆ ನಾನಿರುವ ಜಾಗದಲ್ಲೇ ಮಿನಿ ವಿಧಾನಸೌಧ ನಿರ್ಮಿಸಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಸುಮಾರು 17,600 ಚದುರ ಅಡಿಗಳ ಸುಮಾರು ್ಙ 2.5 ಕೋಟಿ ವೆಚ್ಚದ ಮಿನಿ ವಿಧಾನಸೌಧ ತಲೆ ಎತ್ತಲಿದೆ.

ಇದುವರೆಗೂ ಉತ್ತಮ ಸಾರ್ವಜನಿಕ ಜೀವನ ನಡೆಸಿದ ಸಂತೃಒ್ತ ನನಗಿದೆ. ಹೊಸ ಕಟ್ಟಡಕ್ಕಾಗಿ ನಾನು ತೆರಳಲೇ ಬೇಕಾಗಿರುವುದು ಅನಿವಾರ್ಯ. 105 ವರ್ಷಗಳು ಸಾರ್ವಜನಿಕ ಸೇವೆಗೆ ಅವಕಾಶ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಮತ್ತೊಮ್ಮೆ ನಿಮ್ಮ ಮುಂದೆ ಪ್ರಕಟಗೊಳ್ಳುತ್ತೇನೆ ಮಿನಿ ವಿಧಾನಸೌಧವಾಗಿ ಅಲ್ಲಿಯವರೆಗೂ ಟೇಕ್ ಎ ಬ್ರೇಕ್. ಸೀ ಯೂ..!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.