ದಾವಣಗೆರೆ: ಕರೂರು ಕೈಗಾರಿಕಾ ಪ್ರದೇಶದಲ್ಲಿ ಬಳಕೆ ಮಾಡದೇ ಇರುವ ಜಮೀನನ್ನು ಮರಳಿ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು `ಸಮಾಧಿ ಚಳವಳಿ~ ನಡೆಸಿದರು.

ವಿವಾದಿತ ಭೂಮಿಯಲ್ಲಿ ರೈತರೇ ದೊಡ್ಡ ಗುಂಡಿ ತೋಡಿ, ಅದರಲ್ಲಿ 50-60 ಮಂದಿ ಕುಳಿತು ತಮ್ಮನ್ನು ಜೀವಂತ ಸಮಾಧಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

`ನಮ್ಮ ಭೂಮಿ ಕಸಿದುಕೊಂಡ ಸರ್ಕಾರ ನಮ್ಮ ಬದುಕನ್ನು ಹತ್ಯೆ ಮಾಡಿದೆ. ಈಗ ನಾವೇ ಸಮಾಧಿ ತೋಡಿದ್ದೇವೆ. ಜಿಲ್ಲಾಧಿಕಾರಿ ಅಥವಾ ಕೈಗಾರಿಕಾ ಸಚಿವರು ಸ್ಥಳಕ್ಕೆ ಆಗಮಿಸಿ ನಮ್ಮ ಮೇಲೆ ಮಣ್ಣು ಹಾಕಿ ಮುಚ್ಚಲಿ~ ಎಂದು ಆಗ್ರಹಿಸಿದರು.

ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರ 143.25 ಎಕರೆ ರೈತರ ಭೂಮಿ ವಶಪಡಿಸಿಕೊಂಡಿತ್ತು. ಆದರೆ, ಯಾವ ಉದ್ದೇಶಕ್ಕೆ ಭೂಮಿ ವಶಪಡಿಸಿಕೊಳ್ಳಲಾಗಿದೆಯೋ, ಅದೇ ಉದ್ದೇಶಕ್ಕೆ ಬಳಕೆಯಾಗಿರುವುದು ಕೇವಲ 10-12 ಎಕರೆ ಭೂಮಿ. ಉಳಿದ ಭೂಮಿಯನ್ನು ಕೆಲವರ ಹಿತಾಸಕ್ತಿಗಾಗಿ ನೀಡಲಾಗಿದೆ. ಇದುವರೆಗೂ ಅಲ್ಲಿ ಉದ್ದೇಶಿತ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. 40 ಎಕರೆ ಭೂಮಿ ಇದುವರೆಗೆ ಯಾರಿಗೂ ಹಂಚಿಲ್ಲ. ಆ ಭೂಮಿಯನ್ನು ನಿವೇಶನ ಕಳೆದುಕೊಂಡ 1,200 ಮಂದಿಗೆ ಹಂಚಬೇಕು. ರೈತರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ತಕ್ಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಭಾವಿ ರಾಜಕಾರಣಿಗಳಿಗೆ, ಕುಟುಂಬದ ಅನುಕೂಲಕ್ಕೆ ಬಿಜೆಪಿ ಸರ್ಕಾರ ಹೇಗೆ ಡೀನೋಟಿಫಿಕೇಶನ್ ಮಾಡಿದೆ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಈಗ ಕೂಲಿ ಕಾರ್ಮಿಕರು, ರೈತರ ಭೂಮಿ ಹಿಂದಿರುಗಿಸಲು ಡೀನೋಟಿಫಿಕೇಶನ್ ಮಾಡುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ರೈತ ಮುಖಂಡರಾದ ತೇಜಸ್ವಿ ವಿ. ಪಟೇಲ್, ವಾಸನದ ಓಂಕಾರಪ್ಪ, ಪೂಜಾರ್ ಅಂಜಿನಪ್ಪ, ಮರಡಿ ನಾಗಣ್ಣ, ಸೈಯದ್ ನಯಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.